News Karnataka Kannada
Thursday, April 18 2024
Cricket
ವಿದೇಶ

ಕೊರೊನಾ ಸೋಂಕಿತ ಮಾವನನ್ನು ಹೊತ್ತೊಯ್ದು ಮಾನವೀಯತೆ ತೋರಿದ ಸೊಸೆ

Photo Credit :

ಕೊರೊನಾ ಸೋಂಕಿತ ಮಾವನನ್ನು ಹೊತ್ತೊಯ್ದು ಮಾನವೀಯತೆ ತೋರಿದ ಸೊಸೆ

ಭುವನೇಶ್ವರ, : ಕೊರೊನಾ ಸಮಯದಲ್ಲಿ ಇರುವ ಒಂದಷ್ಟು ಮಾನವೀಯತೆಯೂ ಕಣ್ಮರೆಯಾಗಿದೆ. ಮೊದಲು ನಾವು ಬದುಕಿದರೆ ಸಾಕು ಎಂದು ಆಲೋಚಿಸುವ ಸಮಯದಲ್ಲಿ ಈ ಸೊಸೆ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ಕೊರೊನಾ ಸೋಂಕಿತ ಮಾವನನ್ನು ಹೊತ್ತು ಸೊಸೆಯೊಬ್ಬರು ಆಸ್ಪತ್ರೆಗೆ ಸಾಗಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಪತಿ ಸೂರಜ್ ಬೇರೆ ಉರಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಮನೆಯಲ್ಲಿ 74 ವರ್ಷದ ಮಾವನಿಗೆ ಕೊರೊನಾ ತಗುಲಿದೆ. ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದ ಕಾರಣ ಏನು ಮಾಡುವುದೆಂದು ಮಹಿಳೆಗೆ ತೋಚಲಿಲ್ಲ ಹಾಗಾಗಿ ಮಾವನನ್ನು ಹೊತ್ತು ಕೋವಿಡ್‌ ಕೇಂದ್ರಕ್ಕೆ ತೆರಳಿದ್ದಾಳೆ.
ಇವರು ರಹಾದಲ್ಲಿರುವ ಭಟಿಗಾವ್ ನಿವಾಸಿ, ಹತ್ತಿರದ ಕೋವಿಡ್‌ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೊರೊನಾ ಪಾಸಿಟಿವ್ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾವನಿಗೆ ಕೊರೊನಾ ಸೋಂಕು ಇದೆ ಎಂದು ತಿಳಿದರೂ ತನ್ನ ಪ್ರಾಣವನ್ನು ಲೆಕ್ಕಿಸಲು ಅವರನ್ನು ಹೊತ್ತು ಕೋವಿಡ್ ಕೇಂದ್ರಕ್ಕೆ ಸಾಗಿದ ಸೊಸೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾವನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದಾಗಿ ಮಹಿಳೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ತಿಳಿಸಿದ್ದಾರೆ. ಕೋವಿಡ್‌ ಕೇಂದ್ರಕ್ಕೆ ಮಾವ ಒಬ್ಬರನ್ನು ಕಳುಹಿಸಲು ಆಕೆ ಒಪ್ಪದ ಕಾರಣ ಇಬ್ಬರನ್ನೂ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು