News Karnataka Kannada
Thursday, April 25 2024
ವಿದೇಶ

ಕೊರೊನಾದ ಮೂಲ ವುಹಾನ್ ಅಲ್ಲ: ಚೀನಾದ ಹೊಸ ವರಸೆ

Photo Credit :

ಕೊರೊನಾದ ಮೂಲ ವುಹಾನ್ ಅಲ್ಲ: ಚೀನಾದ ಹೊಸ ವರಸೆ

ಚೀನಾ: ವುಹಾನ್ ಗಿಂತ ಮೊದಲೇ ಜಗತ್ತಿನ ಇತರೆ ಭಾಗಗಳಲ್ಲಿ ಕೊರೊನಾ ಹುಟ್ಟಿಕೊಂಡಿತ್ತು. ಆದರೆ, ಜಗತ್ತಿಗೆ ಮೊದಲು ತಿಳಿಸಿದ್ದು ನಾವು ಎಂದು ಚೀನಾ ಇದೀಗ ಹೊಸ ವರಸೆ ತೆಗೆದಿದೆ.

ವಿಶ್ವದ ನಾನಾ ಭಾಗಗಳಲ್ಲಿ ಕೊರೊನಾ ವೈರಸ್ ಭುಗಿಲೆದ್ದಿತ್ತು. ಆದರೆ, ಮೊದಲು ವರದಿ ಮಾಡಿದ ಮತ್ತು ಕಾರ್ಯನಿರ್ವಹಿಸಿದ ಏಕೈಕ ದೇಶ ಚೀನಾ. ವುಹಾನ್‌ನಲ್ಲಿ ಹೊರಹೊಮ್ಮುವ ಮೊದಲು ಮಾರಣಾಂತಿಕ ಸಾಂಕ್ರಾಮಿಕ ರೋಗವು ಹುಟ್ಟಿಕೊಂಡಿದೆ ಎಂದು ಚೀನಾ ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷದ ಕೊನೆಯಲ್ಲಿ ವಿಶ್ವದ ನಾನಾ ಭಾಗಗಳಲ್ಲಿ ಸಾಂಕ್ರಾಮಿಕ ರೋಗವು ಭುಗಿಲೆದ್ದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಇದನ್ನು ಮೊದಲಿಗೆ ವರದಿ ಮಾಡಿದ್ದು ಚೀನಾ. ರೋಗಕಾರಕವನ್ನು ಗುರುತಿಸಿ ಅದರ ವಿವರಗಳನ್ನು ಅನುಕ್ರಮವಾಗಿ ಜಗತ್ತಿನೊಂದಿಗೆ ಹಂಚಿಕೊಳ್ಳಲಾಗಿದೆ ಎಂದರು.

ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ) ಕೊರೋನಾ ವಿಷಯವನ್ನು ಮುಚ್ಚಿಹಾಕಿತ್ತು ಎಂಬ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರ ಆರೋಪಗಳಿಗೆ ಹುವಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷ ಮುಚ್ಚಿಟ್ಟಿದ್ದರಿಂದ ಕೊರೊನಾ ವೈರಸ್ ಬಿಕ್ಕಟ್ಟು ಅನಂತವಾಗಿ ಉಲ್ಬಣಗೊಂಡಿದೆ ಎಂದು ಪೊಂಪಿಯೊ ಟೋಕಿಯೊದಲ್ಲಿ ನಡೆದ ಅಮೆರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ಕ್ವಾಡ್ ಸಭೆಯಲ್ಲಿ ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು