News Karnataka Kannada
Wednesday, April 17 2024
Cricket
ವಿದೇಶ

ಕೊಡಗಿನಲ್ಲಿ ಇದುವರೆಗೆ 3000 ಕ್ಕೂ ಹೆಚ್ಚು ಮಕ್ಕಳಿಗೆ ಹರಡಿದ ಕೊರೋನಾ ಸೋಂಕು

Photo Credit :

   ಕೊಡಗಿನಲ್ಲಿ ಇದುವರೆಗೆ 3000 ಕ್ಕೂ ಹೆಚ್ಚು ಮಕ್ಕಳಿಗೆ ಹರಡಿದ ಕೊರೋನಾ ಸೋಂಕು

ಕೊಡಗು; ಕೊವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಕಾಡುತ್ತದೆ ಎಂದು ಈಗಾಗಲೇ ತಜ್ಞರು ಮತ್ತು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ಕೊವಿಡ್ ಮೂರನೇ ಅಲೆ ಆಗಲೇ ಆರಂಭವಾಗಿದೆಯಾ ಎನ್ನೋ ಆತಂಕ ಶುರುವಾಗಿದೆ. ಹೌದು ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಮಕ್ಕಳಿಗೆ ಆಗಿರುವ ಕೊವಿಡ್ ಸೋಂಕಿನ ಅಂಕಿ ಸಂಖ್ಯೆಗಳನ್ನು ಪರಿಶೀಲಸಿದಾಗ ಜಿಲ್ಲೆಯಲ್ಲಿ ನಿಜವಾಗಿಯೂ ಮೂರನೇ ಆರಂಭವಾಗಿರಬೇಕು ಎನ್ನೋ ಅನುಮಾನ ಕಾಡದೆ ಇರದು. ದೇಶದಲ್ಲಿ ಈಗಾಗಲೇ ಎರಡನೆ ಅಲೆಯನ್ನು ದಾಟುವ ಹಂತದಲ್ಲಿ ನಾವಿದ್ದೇವೆ. ಈ ನಡುವೆ ಕೊಡಗಿನಲ್ಲಿ ಮೂರನೇ ಅಲೆ ಆರಂಭವಾಗಿರೋ ಲಕ್ಷಣಗಳು ಗೋಚರಿಸುತ್ತಿವೆ. ಮೊದಲನೇ ಅಲೆಯಿಂದ ಇದುವರೆಗೆ ಕೊಡಗು ಜಿಲ್ಲೆಯಲ್ಲಿ 21700 ಕ್ಕೂ ಹೆಚ್ಚು ಜನರಿಗೆ ಕೊವಿಡ್ ಸೋಂಕು ತಗುಲಿದೆ. ಅದರಲ್ಲಿ 3609 ಮಕ್ಕಳಿಗೆ ಸೋಂಕು ಒಕ್ಕರಿಸಿದೆ ಎಂದು ಕೊಡಗು ಡಿಎಚ್‍ಓ ಮೋಹನ್ ಕುಮಾರ್ ತಿಳಿಸಿದ್ದಾರೆ.
ಇದುವರೆಗೂ 3609 ಮಕ್ಕಳಿಗೆ ಸೋಂಕು ಹರಡಿದ್ದರೂ ಎರಡನೇ ಅಲೆ ಅಂದರೆ ಮಾರ್ಚ್ ತಿಂಗಳಿನಿಂದ ಇದುವರೆಗೆ ಅತೀ ಹೆಚ್ಚು ಮಕ್ಕಳಿಗೆ ಸೋಂಕು ಹರಡಿದೆ. ಮೊದಲನೇ ಅಲೆಯಲ್ಲಿ ಕೇವಲ 700 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದರೆ, ಎರಡನೇ ಅಲೆಯಲ್ಲಿ 2909 ಮಕ್ಕಳಿಗೆ ಸೋಂಕು ಹರಡಿದೆ. ಇದು ನಿಜವಾಗಿಯೂ ಅತ್ಯಂತ ಅಚ್ಚರಿಯ ಮತ್ತು ಆತಂಕದ ವಿಷಯವೇ ಸರಿ. ಅದರಲ್ಲೂ ಕಳೆದ ಒಂದು ವಾರದಿಂದ ಅಂದರೆ ಮೇ 28 ನೇ ತಾರೀಖಿನಿಂದ ಇಲ್ಲಿಯವರೆಗೆ 244 ಮಕ್ಕಳಿಗೆ ಕೊವಿಡ್ ಸೋಂಕು ದೃಢಪಟ್ಟಿದೆ.
ಇದುವರೆಗೆ 2 ವರ್ಷದವರೆಗಿನ 197 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದರೆ, ಮೂರರಿಂದ ಹತ್ತು ವರ್ಷದೊಳಗಿನ ಮಕ್ಕಳಿಗೆ 1253 ಮಕ್ಕಳಿಗೆ ಮಹಾಮಾರಿ ಹೆಗಲೇರಿದೆ. ಅಷ್ಟೇ ಅಲ್ಲ, 11 ರಿಂದ 18 ವರ್ಷದೊಳಗಿನ ಮಕ್ಕಳಿಗೆ 2159 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಕೊಡಗಿನಲ್ಲಿ ನಿಜವಾಗಿಯೂ ಮೂರನೇ ಅಲೆ ಆರಂಭವಾಗಿದೆಯಾ ಎನ್ನೋ ಅನುಮಾನ ಕಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎನಿಸುತ್ತದೆ. ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಸೋಂಕು ಹರಡುತ್ತಿರುವುದಕ್ಕೆ ಅವರ ಪೋಷಕರೇ ನೇರ ಕಾರಣ ಎನ್ನೋದು ಕೊಡಗು ಡಿಎಚ್‍ಓ ಮೋಹನ್ ಕುಮಾರ್ ಅವರ ಆರೋಪ.
ಪೋಷಕರು ಎಲ್ಲೆಂದರಲ್ಲಿ ಓಡಾಡಿ ಬಂದು ತಮ್ಮ ಮಕ್ಕಳ ಬಳಿಗೆ ತೆರಳುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ ಎಂದಿದ್ದಾರೆ. ಸಾವಿರಾರು ಮಕ್ಕಳಿಗೆ ಸೋಂಕು ಹರಡಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇನ್ನೂ ಮೂರನೇ ಅಲೆ ಆರಂಭವಾಗಿಲ್ಲ ಎನ್ನೋದು ನನ್ನ ಅಭಿಪ್ರಾಯ.
ಆದರೂ ಈ ಸಂಖ್ಯೆಯಲ್ಲಿ ಮಕ್ಕಳಿಗೆ ಹರಡಿರುವುದರಿಂದ ಇನ್ಮುಂದೆ ಮಕ್ಕಳನ್ನು ಹೊರಗೆ ಬಿಡದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಯಾವೆಲ್ಲಾ ಗ್ರಾಮಗಳಲ್ಲಿ ಆಗಿದೆಯೋ ಅವುಗಳನ್ನು ಅಲ್ಲಿಯೇ ತಡೆಯಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಒಂದು ವೇಳೆ ಮಕ್ಕಳನ್ನು ಹೊರಗೆ ಬಿಟ್ಟಲ್ಲಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು