News Karnataka Kannada
Wednesday, April 17 2024
Cricket
ವಿದೇಶ

ಕೇರಳ ರಾಜ್ಯದಲ್ಲಿ ಇಲ್ಲ ಆಕ್ಸಿಜನ್‌ ಕೊರತೆ

Photo Credit :

ಕೇರಳ ರಾಜ್ಯದಲ್ಲಿ ಇಲ್ಲ ಆಕ್ಸಿಜನ್‌ ಕೊರತೆ

ತಿರುವನಂತಪುರಂ: ಹೆಚ್ಚಿನ ಕೋವಿಡ್​ ಪ್ರಕರಣಗಳಿದ್ದರೂ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯ ಬಗ್ಗೆ ದೂರು ಕೇಳಬರದೇ ಇರುವ ಒಂದೇ ಒಂದು ರಾಜ್ಯವೆಂದರೆ ಅದು ಕೇರಳ.ಅದರಲ್ಲೂ ನೆರೆಯ ತಮಿಳುನಾಡು ಮತ್ತು ಕರ್ನಾಟಕಕ್ಕೆ ಆಕ್ಸಿಜನ್​ ಪೂರೈಕೆಯ ನಡುವೆಯೂ ಕೇರಳಕ್ಕೆ ಈ ಸಮಸ್ಯೆ ಕಾಡಿಲ್ಲ. ಈ ಮಧ್ಯೆ ದೆಹಲಿಯಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣಗಳಿಂದಾಗಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಆಕ್ಸಿಜನ್​ ಪೂರೈಕೆಗಾಗಿ ಮಲಯಾಳಿ ಸಮುದಾಯವನ್ನು ಮನವಿ ಮಾಡಿಕೊಂಡಿದ್ದು, ಅದಕ್ಕೆ ಸಕರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿರುವ ಕೇರಳ ಆಕ್ಸಿಜನ್​ ಪೂರೈಸುವ ಭರವಸೆ ನೀಡಿದೆ.
ಇದಕ್ಕೂ ಮುನ್ನ ಮೊದಲನೇ ಅಲೆಯಲ್ಲಿ ಈ ರೀತಿ ನೋಡಿರಲಿಲ್ಲ. 2019ರವರೆಗೂ ಕೇರಳ ಲಿಕ್ವಿಡ್​ ಮೆಡಿಕಲ್​ ಆಕ್ಸಿಜನ್​ (ಎಲ್​ಎಂಒ)ಗಾಗಿ ತಮಿಳುನಾಡು ಮತ್ತು ಕರ್ನಾಟಕದ ಮೇಲೆ ಅವಲಂಬನೆಯಾಗಿತ್ತು. ಆದರೆ, ಕಳೆದ ಬಾರಿ ಕೋವಿಡ್​ ಕಲಿಸಿದ ಪಾಠವನ್ನು ಮರೆಯದ ಕೇರಳ ಇಂದು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.ಮೊದಲನೇ ಅಲೆಯಲ್ಲಿ ಮಹಾರಾಷ್ಟ್ರ ನಂತರದ ಎರಡನೇ ಸ್ಥಾನ ಕಾಯ್ದುಕೊಂಡಿದ್ದ ಕೇರಳ ಇದೀಗ ಎರಡನೇ ಅಲೆಯಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ನಂತರದ ನಾಲ್ಕನೇ ಸ್ಥಾನದಲ್ಲಿದೆ. ಕೇರಳಕ್ಕೆ ದಿನವೊಂದಕ್ಕೆ 100 ಟನ್​ಗಿಂತಲೂ ಕಡಿಮೆ ಆಕ್ಸಿಜನ್​ ಅವಶ್ಯಕತೆ ಇದೆ. ಆದರೆ, ಕೇರಳ ದಿನವೊಂದಕ್ಕೆ 204 ಟನ್​ನಷ್ಟು ಆಕ್ಸಿಜನ್​ ಉತ್ಪಾದನೆ ಮಾಡುತ್ತಿದೆ.
ಕರೊನಾದ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದೆ ಕೇರಳದಲ್ಲಿ. 2020ರ ಜನವರಿಯಲ್ಲಿ ಮೊದಲ ಪ್ರಕರಣ ವರದಿಯಾಯಿತು. ಕರೊನಾ ಸ್ಫೋಟಗೊಂಡ ಚೀನಾದ ವುಹಾನ್​ ನಗರದಿಂದ ವ್ಯಕ್ತಿಯೊಬ್ಬ ಕೇರಳಕ್ಕೆ ಬಂದಿದ್ದೇ ಸೋಂಕು ಆರಂಭವಾಗಲು ಕಾರಣವಾಯಿತು. ಇದಾದ ಬಳಿಕ ರಾಜ್ಯದಲ್ಲಿ ಮೊದಲನೇ ಅಲೆಯಲ್ಲಿ ಉಂಟಾದ ಪರಿಣಾಮವನ್ನು ಅರಿತ ಅಲ್ಲಿನ ಸರ್ಕಾರ ಅತಿ ಬೇಗನೇ ಆಕ್ಸಿಜನ್​ ಅವಶ್ಯಕತೆ ಅರಿತು ಉತ್ಪಾದಿಸಲು ಶುರು ಮಾಡಿತು. ಅದಕ್ಕಾಗಿ ಒಂದು ಟಾಸ್ಕ್​ಫೋರ್ಸ್​ ಸಹ ಸರ್ಕಾರ ನೇಮಿಸಿತು.
ಸದ್ಯ ಕೇರಳದಲ್ಲಿ 23 ಆಕ್ಸಿಜನ್​ ಉತ್ಪಾದನಾ ಘಟಕಗಳು ಇವೆ. ಇದರಲ್ಲಿ ಹೆಚ್ಚಿನವು ಕಳೆದ ಎರಡು ವರ್ಷಗಳಿಂದೀಚೆಗೆ ಕಾರ್ಯಾರಂಭ ಮಾಡಿವೆ. ಕೇರಳವು ತನ್ನ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯದಲ್ಲಿ ಶೇಕಡ 60 ರಷ್ಟನ್ನು ಹೆಚ್ಚಿಸಿದೆ ಎಂದು ವರದಿಗಳು ತಿಳಿಸಿವೆ. ಕಳೆದ ಬಾರಿ ಅನುಭವಿಸಿದ ತೊಂದರೆಯ ನಡುವೆ ಪಾಠ ಕಲಿತ ಕೇರಳ ಸರ್ಕಾರ ಮೂಲಸೌಕರ್ಯಗಳಾದ ಆಸ್ಪತ್ರೆ ಬೆಡ್​ಗಳು ಮತ್ತು ಆಕ್ಸಿಜನ್​ ಪೂರೈಕೆಯನ್ನು ಹೆಚ್ಚಿಸಿದ್ದರ ಪರಿಣಾಮ ಇಂದು ಕೇರಳ ಕೋವಿಡ್​ ಎರಡನೇ ಅಲೆಯಲ್ಲಿ ಸಮರ್ಥವಾಗಿ ಎದುರಿಸುತ್ತಿದೆ. ಇದು ಇತರೆ ರಾಜ್ಯಗಳಿಗೆ ನಿಜಕ್ಕೂ ಮಾದರಿಯ ವಿಚಾರವೇ ಸರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು