News Karnataka Kannada
Monday, April 22 2024
Cricket
ವಿದೇಶ

ಕೇರಳದ ನೂತನ ಆರೋಗ್ಯ ಸಚಿವೆಯಾಗಿ ವೀಣಾ ಜಾರ್ಜ್!

Photo Credit :

ಕೇರಳದ ನೂತನ ಆರೋಗ್ಯ ಸಚಿವೆಯಾಗಿ ವೀಣಾ ಜಾರ್ಜ್!

ತಿರುವನಂತಪುರಂ : ಮಾಜಿ ಪತ್ರಕರ್ತೆ ಮತ್ತು ಅರಣಮುಲಾ ಕ್ಷೇತ್ರದ ಶಾಸಕಿ ವೀಣಾ ಜಾರ್ಜ್​ ಅವರನ್ನು ಕೇರಳದ ನೂತನ ಆರೋಗ್ಯ ಸಚಿವೆಯಾಗಿ ಆಯ್ಕೆ ಮಾಡಲಾಗಿದೆ. ಸಿಎಂ ಪಿಣರಾಯಿ ವಿಜಯನ್ ಅವರ ನೇತೃತ್ವದ ಎಲ್​ಡಿಎಫ್ ಸರ್ಕಾರದ ಹಿಂದಿನ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರು ಗಳಿಸಿದ್ದ ವರ್ಚಸ್ಸಿಗೆ ಸರಿಸಮನಾಗಿ ಕಾರ್ಯನಿರ್ವಹಿಸುವುದರಲ್ಲಿ ವೀಣಾ ಜಾರ್ಜ್​ ಯಶಸ್ವಿಯಾಗುವರೇ ಎಂದು ಕಾದುನೋಡಬೇಕಿದೆ.

ಹಿಂದಿನ ಅವಧಿಯ ಆರೋಗ್ಯ ಸಚಿವೆ 64 ವರ್ಷದ ಶೈಲಜಾ ಅವರನ್ನೇ ಆರೋಗ್ಯ ಸಚಿವರಾಗಿ ಮುಂದುವರೆಸುವರೆಂಬ ಅಪೇಕ್ಷೆ ಹಲವರಲ್ಲಿತ್ತು. ಅವರು ಕರೊನಾ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆಂಬ ಅಭಿಪ್ರಾಯ ಹಲವು ನಾಯಕರಿಗಿತ್ತು ಎನ್ನಲಾಗಿದೆ. ಆದರೆ, ಇದೀಗ ಆರೋಗ್ಯ ಸಚಿವಾಲಯದ ದಾಯಿತ್ವವು ಜಾರ್ಜ್​ ಅವರ ತೆಕ್ಕೆಗೆ ಬಿದ್ದಿದೆ.

ಎಡಪಕ್ಷಗಳು ಸಂಪುಟ ರಚನೆಯನ್ನು ಆರಂಭಿಸಿದಾಗಿನಿಂದ, ವೀಣಾ ಅವರ ಹೆಸರು ಕೇಳಿಬರುತ್ತಿತ್ತು ಎನ್ನಲಾಗಿದೆ. ತಮ್ಮ ನಾಯಕತ್ವ ಗುಣಗಳಿಗೆ ಖ್ಯಾತರಾದ ಜಾರ್ಜ್​, 15 ವರ್ಷ ಪ್ರಮುಖ ಮಲಯಾಳಂ ಚಾನೆಲ್​ಗಳಲ್ಲಿ ವಾರ್ತಾ ನಿರೂಪಕಿಯಾಗಿ ಜನಪ್ರಿಯರಾಗಿದ್ದು, 2016 ರಲ್ಲಿ ಮೊದಲ ಬಾರಿಗೆ ಶಾಸಕಿಯಾಗಿದ್ದರು. ಸಿಪಿಐ(ಎಂ)ನ ಪಟ್ಟನಂತಿಟ್ಟ ಪ್ರದೇಶ ಸಮಿತಿಯ ಸದಸ್ಯರಾಗಿರುವ ಅವರು, 2018 ಮತ್ತು 2019 ರಲ್ಲಿ ಪಟ್ಟನಂತಿಟ್ಟದಲ್ಲಿ ಪ್ರವಾಹ ಉಂಟಾದಾಗ ಮಾಡಿದ ಸೇವೆಗೆ ಗುರುತಿಸಲ್ಪಟ್ಟಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು