News Karnataka Kannada
Sunday, April 21 2024
Cricket
ವಿದೇಶ

ಕೇರಳದ ಆಸ್ಪತ್ರೆಯಲ್ಲಿ ನಡೆಯಿತು, ಕೋವಿಡ್ ಪಾಸಿಟಿವ್ ವ್ಯಕ್ತಿಯ ಮದುವೆ!

Photo Credit :

ಕೇರಳದ ಆಸ್ಪತ್ರೆಯಲ್ಲಿ ನಡೆಯಿತು, ಕೋವಿಡ್ ಪಾಸಿಟಿವ್ ವ್ಯಕ್ತಿಯ ಮದುವೆ!

ತಿರುವನಂತಪುರಂ: ಕೇರಳದ ಆಲಪ್ಪುಳ ಜಿಲ್ಲೆಯ ಆಸ್ಪತ್ರೆಯ ಕೋವಿಡ್ ವಾರ್ಡ್, ಕೋವಿಡ್ ಪಾಸಿಟಿವ್ ರೋಗಿಯ ವಿವಾಹದ ಸ್ಥಳವಾಗಿ ಬದಲಾದ ನಂತರ ಅಪರೂಪದ ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ.

ವರ ಕೈನಕಾರಿ ಮೂಲದ ಶರತ್ ಸೋಮ ಹಾಗೂ ಅವರ ತಾಯಿಗೆ ಮದುವೆಯ ಕೆಲವು ದಿನಗಳ ಮೊದಲು ಕೋವಿಡ್ ಪಾಸಿಟಿವ್ ಬಂದಿತ್ತು. ಇಬ್ಬರನ್ನು ಏಪ್ರಿಲ್ 25 ರಂದು ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

ದುರದೃಷ್ಟಕರ ಬೆಳವಣಿಗೆಯ ಹೊರತಾಗಿಯೂ, ವಧು-ವರರಿಬ್ಬರ ಕುಟುಂಬಗಳು ನಿಗದಿತ ದಿನಾಂಕ ಮತ್ತು ಸಮಯದ ಸಮಾರಂಭದೊಂದಿಗೆ ಮದುವೆ ಮುಂದುವರಿಯಲು ನಿರ್ಧರಿಸಿದರು. ಆಸ್ಪತ್ರೆಯನ್ನು ಸ್ಥಳವಾಗಿ ಆಯ್ಕೆ ಮಾಡಿದರು.ಸಮಾರಂಭವನ್ನು ಕಲೆಕ್ಟರ್ ಮತ್ತು ಆಸ್ಪತ್ರೆ ಅಧೀಕ್ಷಕ ಡಾ.ಆರ್.ವಿ.ರಾಮ್‌ಲಾಲ್ ಅವರಿಂದ ಅನುಮತಿ ಪಡೆದ ನಂತರ,ವಧು ಅಭಿರಾಮಿ, ಸಂಬಂಧಿಗಳು ಮದುವೆಯ ದಿನದಂದು ಪಿಪಿಇ ಕಿಟ್‌ನಲ್ಲಿ ಆಸ್ಪತ್ರೆಗೆ ಬಂದರು.

ವೈದ್ಯರ ಸಮ್ಮುಖದಲ್ಲಿ ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಮದುವೆಯನ್ನು ಒಂದು ವರ್ಷದ ಹಿಂದೆಯೇ ನಿಗದಿಪಡಿಸಲಾಗಿತ್ತು ಆದರೆ ಸಾಂಕ್ರಾಮಿಕ ರೋಗವು ದೇಶವನ್ನು ಹಿಡಿದಿಟ್ಟುಕೊಂಡಿದ್ದರಿಂದ ಅದನ್ನು ಮುಂದೂಡಬೇಕಾಯಿತು’ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 21 ರಂದು ಶರತ್ ಸೋಮ ಮತ್ತು ಅವರ ತಾಯಿ ಉಸಿರಾಟದ ತೊಂದರೆಯಾದಾಗ ಅತಿಥಿಗಳ ಪಟ್ಟಿಯನ್ನು 75 ಕ್ಕೆ ಇಳಿಸಿದ ನಂತರ, ಕುಟುಂಬಗಳು ಮದುವೆಗೆ ಸಜ್ಜಾಗಿದ್ದರು. ಆದರೆ ವರ ಮತ್ತು ತಾಯಿಗೆ ಕೋವಿಡ್ ದೃಢಪಟ್ಟಿತ್ತು. ವರದಿಯ ಪ್ರಕಾರ, ಅಭಿರಾಮಿ ತನ್ನ ಸಂಬಂಧಿಕರ ಸ್ಥಳಕ್ಕೆ ಹಿಂದಿರುಗಲಿದ್ದು, ಶರತ್ ಸೋಮ ಅವರ ಕೋವಿಡ್ ವರದಿ ನೆಗೆಟಿವ್ ಬಂದ ನಂತರ ಮತ್ತು ಅವರ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ ನಂತರವೇ ಮನೆಗೆ ತೆರಳಬಹುದು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು