News Karnataka Kannada
Monday, April 22 2024
Cricket
ವಿದೇಶ

ಕೇರಳದಲ್ಲಿ ಒಂದು ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ

Photo Credit :

ಕೇರಳದಲ್ಲಿ  ಒಂದು ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ

ತಿರುವನಂತಪುರಂ, : ಕೇರಳ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ, ಕೊರೊನಾ ಮಾರ್ಗಸೂಚಿಯಂತೆ ನಡೆದಿದೆ. ಬಹುತೇಕ, ಮತಗಟ್ಟೆ ಸಮೀಕ್ಷೆಯ ಪ್ರಕಾರವೇ ಹೆಚ್ಚಿನ ಫಲಿತಾಂಶಗಳು ಬಂದಿವೆ.
ದೇವರ ನಾಡು ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌, ಸರಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯವಾಗಿ, ಪ್ರತಿ ಚುನಾವಣೆಗೂ ಅಧಿಕಾರ ನಡೆಸಿದ ಪಕ್ಷದ ಮೇಲೆ ನಿಯತ್ತು ತೋರಿಸದ ಅಲ್ಲಿನ ಮತದಾರ, ಈ ಬಾರಿ ಎಲ್‌ಡಿಎಫ್‌ ಮೇಲೆಯೇ ವಿಶ್ವಾಸವನ್ನು ಇಟ್ಟಿದ್ದಾನೆ.
ಒಟ್ಟು 140 ಸ್ಥಾನದ ಫಲಿತಾಂಶ ಪ್ರಕಟವಾಗಿದ್ದು, ಎಲ್‌ಡಿಎಫ್‌ 99 ಸ್ಥಾನದಲ್ಲಿ ಗೆದ್ದರೆ, ಪ್ರಮುಖ ವಿರೋಧ ಪಕ್ಷವಾದ ಯುಡಿಎಫ್ 41ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಪಿಣರಾಯಿ ಎಂಟು ಸ್ಥಾನವನ್ನು ಹೆಚ್ಚು ಗೆದ್ದರೆ, ಯುಡಿಎಫ್ ಆರು ಸ್ಥಾನವನ್ನು ಕಳೆದುಕೊಂಡಿದೆ.ಕಳೆದ ಅಂದರೆ 2016ರ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿ ಗೆದ್ದಿತ್ತು, ಇತರರು ಏಳು ಸ್ಥಾನದಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಅಬ್ಬರದ ಪ್ರಚಾರದ ನಡುವೆಯೂ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಆದಿಯಾಗಿ ಬಿಜೆಪಿ, ಕೇರಳದಲ್ಲಿ ಭಾರಿ ಪ್ರಚಾರವನ್ನು ನಡೆಸಿತ್ತು. ರಾಜ್ಯವ್ಯಾಪಿ ಹಲವು ಜಾಥಾ, ರೋಡ್ ಶೋಗಳನ್ನು ನಡೆಸಿತ್ತು. ಕೆಲವು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವನ್ನೂ ಬಿಜೆಪಿ ಹಾಕಿಕೊಂಡಿತ್ತು. ಆದರೆ, ಕೇರಳದ ಮತದಾರ ಎಲ್‌ಡಿಎಫ್‌ ಮತ್ತು ಯುಡಿಎಫ್ ನಡುವೆ ಸೀಟನ್ನು ಹಂಚಿ ಬಿಟ್ಟಿದ್ದಾನೆ.
ಯುಡಿಎಫ್ ಜೊತೆಗಿನ ಹಣಾಹಣಿ ಮತ್ತು ಬಿಜೆಪಿಯ ಅಬ್ಬರದ ಪ್ರಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಕೇರಳದ ಸಿಎಂ ಪಿಣರಾಯಿ ವಿಜಯನ್, “ನಮ್ಮ ಅಭಿವೃದ್ದಿ ಮಂತ್ರವೇ ನಮಗೆ ಶ್ರೀರಕ್ಷೆ. ಬಿಜೆಪಿ ಕಳೆದ ಬಾರಿ ಒಂದು ಸೀಟ್ ಅನ್ನು ಗೆದ್ದಿತ್ತು, ಈ ಬಾರಿ ಅದನ್ನು ಝೀರೋ ಮಾಡುತ್ತೇವೆ, ನೋಡುತ್ತಿರಿ”ಎನ್ನುವ ವಿಶ್ವಾಸದ ಮಾತನ್ನು ಪಿಣರಾಯಿ ಆಡಿದ್ದರು. ಪಿಣರಾಯಿ ಹೇಳಿದಂತೆ ಬಿಜೆಪಿ ಯಾವ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೆಟ್ರೋ ಮ್ಯಾನ್ ಶ್ರೀಧರನ್ ಕೂಡಾ ಸೋಲುಂಡಿದ್ದಾರೆ. ಕರ್ನಾಟಕ ಗಡಿ ಕ್ಷೇತ್ರವಾದ ಮಂಜೇಶ್ವರ, ಕಾಸರಗೋಡು ಮುಂತಾದ ಕಡೆಯೂ ಬಿಜೆಪಿ ಸೋಲುಂಡಿದೆ. ಆ ಮೂಲಕ, ಕೇರಳದಲ್ಲಿ ಪಕ್ಷದ ಬೇರನ್ನು ವೃದ್ದಿಸಬೇಕು ಎನ್ನುವ ಮಹತ್ವಾಕಾಂಕ್ಷೆಗೆ ಮತದಾರ ಕಿವಿಗೊಡಲಿಲ್ಲ.
ಇತರ ಪಕ್ಷಗಳ ಸಹಯೋಗದೊಂದಿಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಏರಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು. ಅದರಲ್ಲಿ, ಡಿಎಂಕೆ ಹೊಂದಾಣಿಕೆಯೊಂದಿಗೆ ಕಾಂಗ್ರೆಸ್ ತಕ್ಕಮಟ್ಟಿಗಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬಹುದು ಎನ್ನುವ ಅಮಿತ್ ಶಾ/ಮೋದಿ ಲೆಕ್ಕಾಚಾರ, ಕೇರಳದಲ್ಲಿ ಮಾತ್ರ ಸಂಪೂರ್ಣ ಉಲ್ಟಾ ಹೊಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು