News Karnataka Kannada
Monday, April 15 2024
Cricket
ವಿದೇಶ

ಕೇರಳದಲ್ಲಿ ಅಣೆಕಟ್ಟುಗಳಲ್ಲಿ ಹೆಚ್ಚಿದ ನೀರಿನ ಮಟ್ಟ

Photo Credit :

ಕೇರಳದಲ್ಲಿ  ಅಣೆಕಟ್ಟುಗಳಲ್ಲಿ ಹೆಚ್ಚಿದ ನೀರಿನ ಮಟ್ಟ

ಕೊಚ್ಚಿ: ಕೇರಳದ ಕರಾವಳಿ ಭಾಗದಿಂದ ತೌಕ್ತೆ ಚಂಡಮಾರುತವು ದೂರ ಸರಿದಿದೆ. ಆದರೂ ರಾಜ್ಯದ ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಹೆಚ್ಚಿದೆ. ಎರ್ನಾಕುಳಂ, ಇಡುಕ್ಕಿ ಮತ್ತು ಮಲಪ್ಪುರಂನಲ್ಲಿ ಭಾರಿ ಅಥವಾ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಈ ಮೂರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.
‘ಮಧ್ಯ ಕೇರಳದ ಜಿಲ್ಲೆಗಳ ಹಲವು ಅಣೆಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಪೆರಿಂಗಲ್ಕುತ್ತು ಅಣೆಕಟ್ಟಿನ ನೀರಿನ ಮಟ್ಟವು 419.41 ಮೀಟರ್ ಅನ್ನು ಮೀರಿದರೆ, ಅದರ ಗೇಟುಗಳನ್ನು ತೆರೆಯಲಾಗುವುದು’ ಎಂದು ತ್ರಿಶ್ಶೂರ್ ಜಿಲ್ಲಾಡಳಿತ ತಿಳಿಸಿದೆ. ‘ಮಲಂಕಾರ ಮತ್ತು ಇಡುಕ್ಕಿ ಜಿಲ್ಲೆಯ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾದ್ದರಿಂದ ಅದರ ಗೇಟುಗಳನ್ನು ಭಾನುವಾರ ತೆರೆಯಲಾಗುವುದು. ತೊಡುಪುಳ, ಮುವಾಟ್ಟುಪುಳ ನದಿ ಮತ್ತು ಅದರ ಉಪನದಿಗಳ ಬಳಿ ವಾಸವಾಗಿರುವವರು ಜಾಗೂರುಕರಾಗಿರುವಂತೆ’ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
‘ಕರಾವಳಿ ತೀರದಲ್ಲಿ ವಾಸಿಸುವ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು