News Karnataka Kannada
Thursday, April 18 2024
Cricket
ವಿದೇಶ

ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವಿಗೆ ಪ್ರಧಾನಿ ಸಹಿತ ಗಣ್ಯರಿಂದ ಸಂತಾಪ

Photo Credit :

ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವಿಗೆ ಪ್ರಧಾನಿ ಸಹಿತ ಗಣ್ಯರಿಂದ ಸಂತಾಪ

ನವದೆಹಲಿ: ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಸಾವಿಗೆ ರಾಷ್ಟ್ರಪತಿ ರಾಮನಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿರುವರು.

ಅಂಗಡಿ ಅವರು ಕೊರೋನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡ ಸುಮಾರು ಎರಡು ವಾರಗಳ ನಂತರ ನಿಧನರಾಗಿದ್ದಾರೆ. ಅವರ ಸ್ಥಿತಿ ಹದಗೆಟ್ಟ ನಂತರ ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಅಸಫಲವಾದ ಕಾರಣ ಸೆಪ್ಟೆಂಬರ್ 23ರಂದು ವಿಧಿವಶರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಚಿವರ ಸಾವಿಗೆ ತಮ್ಮ ಸಂತಾಪವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.

“ಸುರೇಶ್ ಅಂಗಡಿ ಅವರು ಕರ್ನಾಟಕದಲ್ಲಿ ಪಕ್ಷವನ್ನು ಸದೃಢಗೊಳಿಸಲು ಶ್ರಮಿಸಿದ ಅಸಾಧಾರಣ ಕಾರ್ಯಕರ್ತ. ಅವರು ಸಮರ್ಪಿತ ಸಂಸದ ಮತ್ತು ಪರಿಣಾಮಕಾರಿ ಸಚಿವರಾಗಿದ್ದರು. ಅವರ ನಿಧನ ದುಃಖಕರವಾಗಿದೆ. ನನಗಿಂತಲು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದು ಅತೀವ ದುಃಖಕರ ಸಂಗತಿಯಾಗಿದೆ. ಓಂ ಶಾಂತಿ, ”ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.

“ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನವನ್ನು ತಿಳಿದು ಆಘಾತಕ್ಕೊಳಗಾಗಿದ್ದೇನೆ. ಸ್ನೇಹಪರ ನಾಯಕ ಅಂಗಡಿ ತಮ್ಮ ಕ್ಷೇತ್ರವಾದ ಬೆಳಗಾವಿ ಮತ್ತು ಕರ್ನಾಟಕದ ಜನರಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದರು” ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಮತ್ತು ಜನತಾದಳ ಮುಖ್ಯಸ್ಥ ಎಚ್‌ಡಿ ದೇವೇಗೌಡ ಅವರು, “ಕೇಂದ್ರ ರೈಲ್ವೆ ರಾಜ್ಯ ಸಚಿವ ಮತ್ತು ನಾಲ್ಕು ಅವಧಿಯ ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ತುಂಬಾ ದುಃಖಿತನಾಗಿದ್ದೇನೆ. ಅವರು ಕಿರಿಯ ಸಹೋದರನಂತೆ ಇದ್ದರು ನನಗೆ. ಅವನನ್ನು ಕಳೆದುಕೊಂಡಿರುವುದು ನನಗೆ ನೋವುಂಟಾಗಿದೆ. ಇದು ನಮ್ಮ ರಾಷ್ಟ್ರಕ್ಕೆ ಅಸಹನೀಯ ನಷ್ಟವಾಗಿದೆ” ಎಂದರು.

ಕಳೆದ ಕೆಲವು ವಾರಗಳಿಂದ ಭಾರತವು ಪ್ರತಿದಿನ 70,000ಕ್ಕಿಂತ ಹೆಚ್ಚು ಕೊರೋನಾ ವೈರಸ್ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಸೋಂಕಿನಿಂದ  ಎಚ್ ವಸಂತಕುಮಾರ್, ಅಶೋಕ್ ಗಸ್ತಿ ಮತ್ತು ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಈ ಹಿಂದೆ ಸಾವನ್ನಪ್ಪಿರುವ ಸಂಸದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು