News Karnataka Kannada
Tuesday, April 16 2024
Cricket
ವಿದೇಶ

ಕೇಂದ್ರ ಕಳುಹಿಸಿದ ಸೌಲತ್ತುಗಳ ದುರ್ಬಳಕೆ ಆರೋಪ; ಸೌಲತ್ತು ಬಳಕೆಯ ಕುರಿತು ಮಾಹಿತಿ ನೀಡುವಂತೆ ರಾಜ್ಯಗಳಿಗೆ ಆದೇಶ!

Photo Credit :

ಕೇಂದ್ರ ಕಳುಹಿಸಿದ ಸೌಲತ್ತುಗಳ ದುರ್ಬಳಕೆ ಆರೋಪ; ಸೌಲತ್ತು ಬಳಕೆಯ ಕುರಿತು ಮಾಹಿತಿ ನೀಡುವಂತೆ ರಾಜ್ಯಗಳಿಗೆ ಆದೇಶ!

ನವದೆಹಲಿ: ದೇಶದಲ್ಲಿ ಕೊರೋನಾದಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ಹಾಗೂ ಲಸಿಕೆ ಅಭಿಯಾನದ ಸಮೀಕ್ಷೆ ನಡೆಸಲು ಇಂದು, ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ. ಬೆಳಗ್ಗೆ 11 ಗಂಟೆಗೆ ಆರಂಭವಾದ ಈ ಸಭೆಯಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳು, ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಆರೋಗ್ಯ ಸಚಿವರೂ ಭಾಗಿಯಾಗಿದ್ದಾರೆ.

 

ಇನ್ನು ಕೊರೋನಾ ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ವೆಂಟಿಲೇಟ್‌, ಆಕ್ಸಿಜನ್ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗಿದ್ದರೂ ಇವುಗಳನ್ನು ರಾಜ್ಯಗಳು ಬಳಸುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದ್ದು, ರಾಜ್ಯಗಳು ತಾವು ಕಳುಹಿಸಿಕೊಟ್ಟ ವೈದ್ಯಕೀಯ ಸಹಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆಯೋ ಎಂಬುವುದನ್ನು ಪರಿಶೀಲಿಸಲು ಈ ಸಭೆಯಲ್ಲಿ ಆಡಿಟ್ ನಡೆಸುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

 

ಸಭೆಯಲ್ಲಿ ಉಲ್ಲೇಖವಾಗ ಪ್ರಮುಖ ಅಂಶಗಳು:

 

* ಸ್ಥಳೀಯ ಮಟ್ಟದಲ್ಲಿ ಕಂಟೋನ್ಮೆಂಟ್‌ ಝೋನ್ ಮಾಡುವ ಬಗ್ಗೆ ಯೋಚಿಸಬೇಕು.

 

* ಪಾಸಿಟಿವಿಟಿ ರೇಟ್‌ ಅತೀ ಹೆಚ್ಚು ಇರುವ ಪ್ರದೇಶಗಳಲ್ಲಿ ಟೆಸ್ಟಿಂಗ್ ಸಮಖ್ಯೆಯೂ ಹೆಚ್ಚಿಸಬೇಕು.

 

* ಡೋರ್‌ ಟು ಡೋರ್‌ ಟೆಸ್ಟಿಂಗ್ ಬಗ್ಗೆ ಗಮನಹರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಬೇಕು.

 

* ಗ್ರಾಮೀಣ ಪ್ರದೇಶಗಳಿಗೂ ಆಕ್ಸಿಜನ್ ಪೂರೈಕೆಯಾಘುವಂತೆ ನೋಡಿಕೊಳ್ಳಬೇಕು.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು