News Karnataka Kannada
Saturday, April 20 2024
Cricket
ವಿದೇಶ

ಕೊರೊನಾ ಇಲ್ಲದಿದ್ದರೆ ಬಿಜೆಪಿ ಶಾಸಕರು ರೆಸಾರ್ಟ್ ಸೇರುತ್ತಿದ್ದರು: ಕಾಂಗ್ರೆಸ್

Photo Credit :

ಕೊರೊನಾ ಇಲ್ಲದಿದ್ದರೆ ಬಿಜೆಪಿ ಶಾಸಕರು ರೆಸಾರ್ಟ್ ಸೇರುತ್ತಿದ್ದರು: ಕಾಂಗ್ರೆಸ್

ಬೆಂಗಳೂರು: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಇಲ್ಲದೆ ಇರುತ್ತಿದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರುತ್ತಿದ್ದರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿದ್ದು, ಕೊರೊನಾ ಇಲ್ಲದೆ ಇದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು! ಇಷ್ಟು ದಿನ ಕೊರೊನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಸಚಿವ ಶಾಸಕರೆಲ್ಲ ಈಗ ಕುರ್ಚಿ ಕದನಕ್ಕಾಗಿ ದಿಡೀರ್ ಪ್ರತ್ಯಕ್ಷರಾಗಿದ್ದಾರೆ. ತನಗೆ ಸಿಕ್ಕ ಅಧಿಕಾರವಧಿಯಲ್ಲೆಲ್ಲ ಕುರ್ಚಿ ಕಾಳಗದಲ್ಲಿ ಮುಳುಗುವ ಬಿಜೆಪಿಯಿಂದ ಜನರ ರಕ್ಷಣೆ ಸಾಧ್ಯವಿಲ್ಲ ಎಂದು ಆರೋಪಿಸಿದೆ.
ಮಗದೊಂದು ಟ್ವೀಟ್‌ನಲ್ಲಿ ಸರ್ಕಾರವು ಖಾಸಗಿ ಆಸ್ಪತ್ರೆಗಳ ಪರವಾಗಿ ಕೋವಿಡ್ ಲಸಿಕೆ ಆರ್ಡರ್ ಮಾಡಿದ್ದೇನಿಸುತ್ತದೆ ಎಂದು ಆರೋಪಿಸಿದೆ. ಕಂಪೆನಿಗಳಲ್ಲಿ ಲಸಿಕೆಗಳಿಗೆ ಆರ್ಡರ್ ಮಾಡಲಾಗಿದೆ ಎಂದು ಬಹಳ ಹಿಂದೆಯೇ ಹೇಳಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಅವರೇ, ಆರ್ಡರ್ ಮಾಡಿದ ಲಸಿಕೆಗಳು ಬಂದವೇ? ಗ್ಲೋಬಲ್ ಟೆಂಡರ್ ಕತೆ ಏನಾಯ್ತು? ಬಿಜೆಪಿಗರು ಖಾಸಗಿ ಆಸ್ಪತ್ರೆಗಳ ಜೊತೆ ನಿಂತು ಪ್ರಚಾರ ನಡೆಸುತ್ತಿರುವುದನ್ನ ನೋಡಿದರೆ ಸರ್ಕಾರದ ಬದಲಿಗೆ ಖಾಸಗಿ ಅಸ್ಪತ್ರೆಗಳ ಪರವಾಗಿ ಆರ್ಡರ್ ಮಾಡಿದ್ದೇನಿಸುತ್ತದೆ! ಎಂದು ಟೀಕಿಸಿವೆ.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜನರಿಗೆ ಲಸಿಕೆ ನೀಡಲು ವಿಫಲವಾಗಿದ್ದು, ‌ಕೊರೊನ ಮಹಾಮಾರಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಜನರ ಜೀವ ಉಳಿಸಲು ಮುಂದಾಗಿದೆ. ಉಚಿತ ಲಸಿಕೆ ನೀಡುವ ಕಾಂಗ್ರೆಸ್‌ನ ₹100 ಕೋಟಿ ಯೋಜನೆಗೆ ಸರ್ಕಾರ ಅನುಮತಿ ನೀಡಲಿ ಎಂದು ಆಗ್ರಹಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು