News Karnataka Kannada
Friday, April 19 2024
Cricket
ವಿದೇಶ

ಕೂಡು ಕುಟುಂಬದಲ್ಲಿ ಮಕ್ಕಳ ವಿಚಾರಕ್ಕಾಗಿ ನಡೆದ ಜಗಳ, ಅತ್ತಿಗೆ ಕೊಲೆಯಿಂದ ಅಂತ್ಯ

Photo Credit :

ಕೂಡು ಕುಟುಂಬದಲ್ಲಿ ಮಕ್ಕಳ ವಿಚಾರಕ್ಕಾಗಿ ನಡೆದ ಜಗಳ, ಅತ್ತಿಗೆ ಕೊಲೆಯಿಂದ ಅಂತ್ಯ

ಚಂಡೀಗಢ: ಕೂಡು ಕುಟುಂಬಗಳಲ್ಲಿ ಜಗಳಗಳು ಸಹಜ. ಅದು ಹೆಚ್ಚಾಗಿ ಮಕ್ಕಳ ವಿಷಯದ ಬಗ್ಗೆ ಅದಿರುತ್ತದೆ. ಆದರೆ ಕೆಲವೊಮ್ಮೆ ಈ ಜಗಳ ವಿಪರೀತಕ್ಕೆ ತಲುಪಿ ಅವಗಡಗಳು ನಡೆದುಹೋಗುತ್ತದೆ. ಅಂತಹದೇ ಒಂದು ಘಟನೆ ಹರಿಯಾಣದಲ್ಲಿ ನಡೆದಿದೆ. ಮಕ್ಕಳ ವಿಚಾರಕ್ಕೆ ಆರಂಭವಾದ ಜಗಳಕ್ಕೆ ಮೈದುನನೊಬ್ಬ ಅತ್ತಿಗೆಯ ಹತ್ತಿಯನ್ನು ಮಾಡಿದ್ದಾನೆ.  

 

ಹರಿಯಾಣದ ಅಂಬಲ ನಗರದಲ್ಲಿ ವಾಸವಾಗಿದ್ದ ಕೂಡು ಕುಟುಂಬವೊಂದರಲ್ಲಿ , ಅನಿಲ್​ ಮತ್ತು ಧೀರಜ್​ ಅಣ್ಣ ತಮ್ಮ ಹಾಗೂ ಅವರ ಹೆಂಡತಿಯರು ವಾಸವಾಗಿದ್ದು, ಮಕ್ಕಳ ವಿಚಾರವಾಗಿ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ. ಅಂತೆಯೇ ಈ ಬಾರಿಯೂ ಆರಂಭವಾದ ಜಗಳ ವಿಪರೀತಕ್ಕೆ ತಲುಪಿ ತಮ್ಮ ಧೀರಜ್ ಅತ್ತಿಗೆಯ ಜೊತೆ ವಾದ ಕುಳಿತಿದ್ದ. ಆ ಸಂದರ್ಭದಲ್ಲಿ ಸ್ಥಿಮಿತ ಕಳೆದುಕೊಂಡ ಆತ ಅತ್ತಿಗೆ ಸ್ವಪ್ನಾಳನ್ನು ಹತ್ಯೆಗೈದಿದ್ದಾನೆ. 

 

ಹೆಂಡತಿಗೆ ತಮ್ಮ ಚಾಕುವಿನಿಂದ ಇರಿದಿದ್ದನ್ನು ಕಂಡು ಭಯಗೊಂಡ ಅನಿಲ್​ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಈ ವಿಚಾರವಾಗಿ ಅನಿಲ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ತಮ್ಮನ ವಿರುದ್ಧ ದೂರು ನೀಡಿದ್ದಾನೆ. ಪ್ರಸ್ತುತ ಧೀರಜ್​ ಮತ್ತು ಆತನ ಹೆಂಡತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು