News Karnataka Kannada
Thursday, April 25 2024
Cricket
ವಿದೇಶ

ಕಾರ್ಗಿಲ್ ನಲ್ಲಿ 72 ಗಂಟೆಗಳಲ್ಲಿ ಎರಡನೆ ಬಾರಿ ಕಂಪಿಸಿದ ಭೂಮಿ

Photo Credit :

ಕಾರ್ಗಿಲ್ ನಲ್ಲಿ 72 ಗಂಟೆಗಳಲ್ಲಿ ಎರಡನೆ ಬಾರಿ ಕಂಪಿಸಿದ ಭೂಮಿ

ಕಾರ್ಗಿಲ್​: ಕಾರ್ಗಿಲ್ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ 4.2ರಷ್ಟು ಭೂಕಂಪನ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ಬೆಳಗ್ಗೆ ಸುಮಾರು 9.20ರ ಸಮಯದಲ್ಲಿ ಭೂಕಂಪನವಾಗಿದೆ ಎನ್ನಲಾಗುತ್ತಿತ್ತು, ಭೂಕಂಪನ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿತ್ತು ಹಾಗೂ ಅದರ ತೀವ್ರತೆ 4.2 ರಷ್ಟು ಭೂಕಲ್ಪನಾ ಮಾಪನದಲ್ಲಿ ದಾಖಲಾಗಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಅ. 6 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 5.1 ರಷ್ಟು ಭೂಕಂಪ ಸಂಭವಿಸಿದೆ. ಹಾಗೂ ಕಳೆದ 72 ಗಂಟೆಗಳಲ್ಲಿ ಲಡಾಖ್ ನಲ್ಲಿ ಸಂಭವಿಸಿದ ಎರಡನೇ ಭೂಕಂಪನ ಇದಾಗಿದೆ.

ಅ. 8, 2005 ರಂದು, ರಿಕ್ಟರ್ ಮಾಪಕದಲ್ಲಿ 7.6 ರಷ್ಟಿರುವ ಭೂಕಂಪನವು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಎರಡು ಬದಿಗಳಲ್ಲಿ 80,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಈ ಘಟನೆ ಮತ್ತೆ ಅದನ್ನು ನೆನಪಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು