News Karnataka Kannada
Thursday, April 25 2024
ವಿದೇಶ

ಕರ್ನಾಟಕದ ಕೊರೊನಾ ಪ್ರಕರಣಗಳಲ್ಲಿ ಕೊಂಚ ಇಳಿಕೆ

Photo Credit :

ಕರ್ನಾಟಕದ ಕೊರೊನಾ ಪ್ರಕರಣಗಳಲ್ಲಿ ಕೊಂಚ ಇಳಿಕೆ

ಬೆಂಗಳೂರು, : ರಾಜ್ಯದಲ್ಲಿ ಶನಿವಾರ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಮೇ 29ರಂದು 20,628 ಹೊಸ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
24 ಗಂಟೆಗಳ ಅವಧಿಯಲ್ಲಿ 492 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಂದು ದಿನದಲ್ಲಿ 42,444 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರ ಪ್ರದೇಶದಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ.
ಶನಿವಾರದ ಅಂಕಿ ಅಂಶದಂತೆ ಕರ್ನಾಟಕದಲ್ಲಿ ಒಟ್ಟು 2567449 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 2189064 ಸೋಂಕಿತರು ಗುಣಮುಖರಾಗಿದ್ದು, 350066 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಕೋವಿಡ್ ಅಂಕಿ ಸಂಖ್ಯೆ: ಬಾಗಲಕೋಟೆ 166, ಬಳ್ಳಾರಿ 671, ಬೆಳಗಾವಿ 1027, ಬೆಂಗಳೂರು ಗ್ರಾಮಾಂತರ 557, ಬೆಂಗಳೂರು 4889, ಬೀದರ್ 42, ಚಾಮರಾಜನಗರ 365, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 843, ಚಿತ್ರದುರ್ಗ 763, ದಕ್ಷಿಣ ಕನ್ನಡ 923, ದಾವಣಗೆರೆ 449, ಧಾರವಾಡ 519, ಗದಗ 307, ಹಾಸನ 1024, ಹಾವೇರಿ 194, ಕಲಬುರಗಿ 107, ಕೊಡಗು 333, ಕೋಲಾರ 684, ಕೊಪ್ಪಳ 350, ಮಂಡ್ಯ 453, ಮೈಸೂರು 1720, ರಾಯಚೂರು 340, ರಾಮನಗರ 181, ಶಿವಮೊಗ್ಗ 672, ತುಮಕೂರು 1102, ಉಡುಪಿ 684, ಉತ್ತರ ಕನ್ನಡ 536, ವಿಜಯಪುರ 210, ಯಾದಗಿರಿ 83 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು