News Karnataka Kannada
Thursday, April 25 2024
Cricket
ವಿದೇಶ

ಕಮಲ್ ಹಾಸನ್‌ಗೆ ತೀವ್ರ ನಿರಾಸೆ: ಅಂತಿಮ ಸುತ್ತಿನಲ್ಲಿ ಸೋಲು

Photo Credit :

ಕಮಲ್ ಹಾಸನ್‌ಗೆ ತೀವ್ರ ನಿರಾಸೆ: ಅಂತಿಮ ಸುತ್ತಿನಲ್ಲಿ ಸೋಲು

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಸಮಯದಲ್ಲಿ ಗಮನ ಸೆಳೆದಿದ್ದ ಕಮಲ್ ಹಾಸನ್‌ ಸ್ಥಾಪಿತ ಹೊಸ ಪಕ್ಷ ‘ಮಕ್ಕಳ್ ನಿಧಿ ಮಯಂ’ ಫಲಿತಾಂಶದಲ್ಲಿ ಗುರುತು ಮೂಡಿಸಲು ವಿಫಲವಾಗಿದೆ.
ಸ್ವತಃ ಕಮಲ್ ಹಾಸನ್ ಸೇರಿದಂತೆ ಪಕ್ಷದ ಯಾವೊಬ್ಬ ಅಭ್ಯರ್ಥಿ ಸಹ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಫಲರಾಗಿದ್ದಾರೆ. ಅಂತಿಮ ಸುತ್ತಿನವರೆಗೂ ಮುನ್ನಡೆಯಲ್ಲಿದ್ದ ಕಮಲ್ ಹಾಸನ್ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದರಾದರೂ ಅಂತಿಮವಾಗಿ ಅವರೂ ಸೋಲು ಕಂಡಿದ್ದಾರೆ.
ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಯಂ ಪಕ್ಷವು 193 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿತ್ತು. ಕಮಲ್ ಹಾಸನ್ ಅವರು ಕೊಯಂಬತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆರಂಭದ ಕೆಲವು ಸುತ್ತುಗಳ ಮತ ಎಣಿಕೆ ಬಳಿಕ ಮುನ್ನಡೆ ಸಾಧಿಸಿದ್ದ ಕಮಲ್ ಹಾಸನ್ ಕೊನೆಯ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.ಅಂತಿಮ ಮತ ಎಣಿಕೆ ಮುಗಿದಾಗ ಕಮಲ್ ಹಾಸನ್ 49,561 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸ್ 50,798 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಮಲ್‌ ಹಾಸನ್‌ 1237 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಮಯೂರ ಜಯಕುಮಾರ್ 41,081 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು