News Karnataka Kannada
Sunday, April 14 2024
Cricket
ವಿದೇಶ

ಕಪ್ಪು ಬಿಳಿ ಹಳದಿ ಫಂಗಸ್ ನಂತರ ಇದೀಗ ಮತ್ತೊಂದು ಹೊಸ ಫಂಗಸ್ ಪತ್ತೆ

Photo Credit :

ಕಪ್ಪು ಬಿಳಿ ಹಳದಿ ಫಂಗಸ್ ನಂತರ ಇದೀಗ ಮತ್ತೊಂದು ಹೊಸ ಫಂಗಸ್ ಪತ್ತೆ

ಅಹಮದಾಬಾದ್ : ದೇಶದಲ್ಲಿ ಕೊರೋನಾ ದಿಂದಾಗಿ ಅನೇಕರು ಸಂಕಷ್ಟ ಅನುಭವಿಸುತ್ತಿದ್ದು, ಅದರ ಬೆನ್ನಲ್ಲೆ ಹುಟ್ಟಿಕೊಂಡಿರುವ ಕಪ್ಪು , ಬಿಳಿ ಹಾಗೂ ಹಳದಿ ಫಂಗಸ್ ದೇಶದ ಜನರನ್ನು ಆತಂಕಕ್ಕೀಡು ಮಾಡಿತ್ತು. ಈ ಎಲ್ಲದರ ನಡುವೆ ಇದೀಗ ಮತ್ತೊಂದು ಫಂಗಸ್ ತಲೆಯೆತ್ತುತ್ತಿದೆ ಎಂಬ ವಿಷಯ ತಿಳಿದುಬಂದಿದೆ. 

 

ಹೌದು, ಆಸ್ಪರ್‌ಗಿಲೋಸಿಸ್ ಎಂಬ ಹೊಸ ಸೋಂಕಿಗೆ ಗುಜರಾತಿನ ವಡೋದರಾದಲ್ಲಿ ಈಗಾಗಲೇ 8 ಮಂದಿ ತುತ್ತಾಗಿದ್ದು , ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ . ಬ್ಲ್ಯಾಕ್ ಫಂಗಸ್ ರೀತಿಯಲ್ಲೇ ಕೊರೋನಾದಿಂದ ಗುಣಮುಖರಾದವರಲ್ಲಿ ಆಸ್ಪರ್‌ಗಿಲೋಸಿಸ್ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ .

 

 ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಆಸ್ಪರ್‌ಗಿಲ್ಲಸ್ ಎಂಬ ಶಿಲೀಂಧ್ರ ಇರುತ್ತದೆ . ಅದರ ಕಣಗಳನ್ನು ಪ್ರತಿನಿತ್ಯ ಜನರು ಗಾಳಿ ಮೂಲಕ ಸೇವಿಸುತ್ತಿರುತ್ತಾರೆ . ಅದರಿಂದ ಜನರಿಗೆ ಅನಾರೋಗ್ಯವೇನೂ ಉಂಟಾಗುವುದಿಲ್ಲ . ಆದರೆ ದುರ್ಬಲ ರೋಗ ನಿರೋಧಕ ಶಕ್ತಿ ಅಥವಾ ಶ್ವಾಸಕೋಶ ಸಮಸ್ಯೆ ಹೊಂದಿದವರಲ್ಲಿ ಆಸ್ಪರ್‌ಗಿಲ್ಲಸ್‌ನಿಂದ ಆರೋಗ್ಯ ಸಮಸ್ಯೆಯಾಗಬಹುದು. ಅಂದಹಾಗೆ, ಆಸ್ಪರ್‌ಗಿಲೋಸಿಸ್ ಸೋಂಕು ಬ್ಲ್ಯಾಕ ಫಂಗಸ್‌ನಷ್ಟು ಅಪಾಯಕಾರಿಯಲ್ಲ . ಆದರೆ ಸ್ವಲ್ಪ ಎಚ್ಚರ ವಹಿಸಿದರೂ ಇದು ಕೂಡ ಪ್ರಾಣಕ್ಕೆ ಕುತ್ತು ತರಬಹುದು ಎಂದು ತಜ್ಞರು ಅಭಿಪ್ರಾಯಸಿದ್ದಾರೆ. 

 

ಈ ಸೋಂಕಿಗೆ ತುತ್ತಾದವರಿಗೆ ಅಲರ್ಜಿಯ ಲಕ್ಷಣಗಳು ಕಂಡುಬರಬಹುದು . ಶ್ವಾಸಕೋಶ ಸೇರಿದಂತೆ ದೇಹದ ವಿವಿಧ ಅಂಗಗಳಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ . ದೇಶದಲ್ಲಿ ಶಿಲೀಂಧ್ರ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ . ಚಿಕಿತ್ಸೆ ವೇಳೆ ಸ್ಟಿರಾಯ್ ಪಡೆದವರು ಹಾಗೂ ರೋಗ ನಿರೋಧಕ ಶಕ್ತಿ ಕುಂದಿದವರಲ್ಲಿ ಶಿಲೀಂಧ್ರ ಸೋಂಕು ಕಂಡುಬರುತ್ತಿದೆ . ಆಮ್ಲಜನಕ ಸರಬರಾಜು ವೇಳೆ ಬಳಸಲಾಗುವ ನಾನ್ ಸ್ಟರೈಲ್ ನೀರಿನಿಂದಲೂ ಈ ಸೋಂಕು ಹರಡುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು