News Karnataka Kannada
Thursday, April 25 2024
Cricket
ವಿದೇಶ

ಕಡಿಮೆ ಆಗದ ಸೋಂಕು ; ಈ ತಿಂಗಳಿಡೀ ಲಾಕ್‌ ಡೌನ್‌ ಮಾಡಲು ರೇವಣ್ಣ ಆಗ್ರಹ

Photo Credit :

ಕಡಿಮೆ ಆಗದ ಸೋಂಕು ; ಈ ತಿಂಗಳಿಡೀ ಲಾಕ್‌ ಡೌನ್‌ ಮಾಡಲು ರೇವಣ್ಣ ಆಗ್ರಹ

ಹಾಸನ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದ ಕಾರಣ ಜೂನ್‌ 30ರ ವರೆಗೂ ಲಾಕ್‌ಡೌನ್‌ ವಿಸ್ತರಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದರು.
ಕೊರೊನಾ ಎರಡನೇ ಅಲೆ ನಿರ್ವರ್ಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಯಿತು. ಹಾಗಾಗಿ 25 ಸಾವಿರ ಜನರು ಪ್ರಾಣ ಕಳೆದುಕೊಂಡರು. ಕೋವಿಡ್‌ ಸಾವಿನ ಬಗ್ಗೆಯೂ ಸರ್ಕಾರ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಹಾಸನ ಜಿಲ್ಲೆಯಲ್ಲಿ ಒಂದು ಮತ್ತು ಎರಡನೇ ಅಲೆಯಿಂದ ಒಂದು ಸಾವಿರ ಜನರು ಮೃತಪಟ್ಟಿದ್ದಾರೆ. ಆದರೆ, ಲೆಕಕ್ಕೆ ಸಿಗದೆ ಮೃತಪಟ್ಟವರ ಸಂಖ್ಯೆ ಒಂದು ಸಾವಿರ ದಾಟುತ್ತದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇಕಡಾ 5ಕ್ಕಿಂತ ಕಡಿಮೆ ಬರುವವರೆಗೂ ಲಾಕ್‌ಡೌನ್‌ ತೆರವು ಮಾಡಬಾರದು. ಇಲ್ಲವಾದರೆ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಜೂನ್‌ ಮತ್ತು ಜುಲೈ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ, ಕಾಲೇಜು ತೆರೆಯಬೇಕು.ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತಿಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಬೇಕು. ಕೋವಿಡ್‌ ಪರಿಸ್ಥಿತಿ ಬಗ್ಗೆ ತಿಳಿಯದೆ ಲಾಕ್‌ಡೌನ್‌ ತೆರವುಗೊಳಿಸುವಂತೆ ಸಚಿವರು ಹೇಳಿಕೆ ನೀಡಬಾರದು. ಸ್ವಲ್ಪ ದಿನ ಕಮಿಷನ್ ಪಡೆಯುವುದನ್ನು ನಿಲ್ಲಿಸಿ, ಜನರ ಆರೋಗ್ಯದ ಕಡೆಗೆ ಸಚಿವರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಕೋವಿಡ್‌ ಚಿಕಿತ್ಸೆಗಾಗಿ ಕೆಲವರು ಮನೆ, ಹೊಲ ಹಾಗೂ ಮಾಂಗಲ್ಯ ಮಾರಾಟ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು ಅಥವಾ ಶೇಕಡಾ 50ರಷ್ಟು ವೈದ್ಯಕೀಯ ವೆಚ್ಚವನ್ನಾದರೂ ಸರ್ಕಾರ ಭರಿಸಲು ಮುಂದಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೇ 14 ರಂದು ಜಿಲ್ಲೆಯಲ್ಲಿ 2,220 ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಯಿತು. ಇದರಲ್ಲಿ 2,200 ಮಂದಿಗೆ ಪಾಸಿಟಿವ್‌ ದೃಢಪಟ್ಟಿದೆ. 15 ದಿನಗಳಿಂದ ಪಾಸಿಟಿವಿಟಿ ದರ ಶೇಕಡಾ 41ರಷ್ಟಿದೆ. ಕೋವಿಡ್‌ ಲಸಿಕೆ ಕೊರತೆ ಇದೆ. ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ 1.32 ಲಕ್ಷ ಮಂದಿಗೆ ಮೊದಲ ಡೋಸ್‌, 4,500 ಮಂದಿಗೆ ಎರಡನೇ ಡೋಸ್‌, 18 ರಿಂದ 49 ವರ್ಷ ವಯಸ್ಸಿನವರಿಗೆ 4 ಸಾವಿರ ಡೋಸ್‌ ಲಸಿಕೆ ನೀಡಲಾಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಸರ್ಕಾರ ಹೇಳಿದೆ. ಇದೇ ರೀತಿ ಮುಂದುವರೆದರೆ ಗುರಿ ಸಾಧನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳು ನಿಂತರೂ ಪರವಾಗಿಲ್ಲ. ಜನರ ಜೀವ ಮೊದಲು ಉಳಿಸಿ. ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡರಿಗೆ ಸುಳ್ಳು ಹೇಳಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಇನ್ನು ಜನ ಸಾಮಾನ್ಯರಿಗೆ ಎಷ್ಟು ಸುಳ್ಳು ಹೇಳಿರಬಹುದು ಎಂದರು.
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಮೊದಲ ಪ್ಯಾಕೇಜ್‌ ಪರಿಹಾರ ಇನ್ನೂ ತಲುಪಿಲ್ಲ. ಪರಿಹಾರ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಲಾಕ್‌ಡೌನ್‌ ಇರುವಾಗ ಅರ್ಜಿ ಹಾಕಲು ಎಲ್ಲಿಗೆ ಹೋಗಬೇಕು. ಈಗ ಮತ್ತೆ ಎರಡನೇ ಹಂತದ ಪ್ಯಾಕೇಜ್‌ ಘೋಷಣೆಗೆ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದ ಶೇಕಡಾ 40 ರಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದು, ಕೋವಿಡ್‌ ಕಾರಣದಿಂದ ಕೆಲಸ ಇಲ್ಲದಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು