News Karnataka Kannada
Saturday, April 20 2024
Cricket
ವಿದೇಶ

ಒಂದೇ ತಿಂಗಳಲ್ಲಿ 15ನೇ ಬಾರಿ ತೈಲದ ದರ ಏರಿಕೆ; ಮುಂಬೈನಲ್ಲಿ ಶತಕ ದಾಟಿದ ಪೆಟ್ರೋಲ್ ದರ

Photo Credit :

ಒಂದೇ ತಿಂಗಳಲ್ಲಿ 15ನೇ ಬಾರಿ ತೈಲದ ದರ ಏರಿಕೆ; ಮುಂಬೈನಲ್ಲಿ ಶತಕ ದಾಟಿದ ಪೆಟ್ರೋಲ್ ದರ

ಮುಂಬೈ : ದೇಶದಲ್ಲಿ ಕೊರೋನಾ ಕಾರಣಕ್ಕಾಗಿ ಲಾಕ್ ಡೌನ್ ದಿನಗಳು ವಿಸ್ತರಿಸುತ್ತಲೇ ಇದ್ದು, ಇದರ ಜೊತೆಜೊತೆಗೆ ಪೆಟ್ರೋಲ್ ಡೀಸೆಲ್ ದರಗಳು ಗಗನಕ್ಕೇರುತ್ತಿವೆ. 

 

ಹೌದು, ಕೇವಲ ಒಂದೇ ತಿಂಗಳಲ್ಲಿ 15ನೇ ಬಾರಿ ತೈಲಗಳ ದರವನ್ನು ತೈಲ ಸಂಸ್ಥೆಗಳು ಸದ್ದಿಲ್ಲದೆ ಹೆಚ್ಚಿಸುತ್ತಲೇ ಇತ್ತು, ಇಂದು ಕೂಡ ಪೆಟ್ರೋಲ್ ಪ್ರತಿ ಲೀಟರ್ ಗೆ 26 ಪೈಸೆ, ಡೀಸೆಲ್ ದರ ಲೀಟರ್ ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ . 

 

ಇಂದಿನ ಹೆಚ್ಚಳದ ನಂತರ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ ಶತಕ ದಾಟಿದೆ . ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 93.94 ರೂಪಾಯಿ ಆಗಿದೆ . ಲೀಟರ್ ಡೀಸೆಲ್ ದರ 91.87 ರೂಪಾಯಿ ಆಗಿದೆ . 15 ಬಾರಿ ದರ ಹೆಚ್ಚಳದಿಂದ ಒಂದು ತಿಂಗಳಲ್ಲಿ ಪೆಟ್ರೋಲ್ 3.54 ರೂಪಾಯಿ ತುಟ್ಟಿಯಾಗಿದೆ . ಡೀಸೆಲ್ 4.16 ರೂಪಾಯಿ ಹೆಚ್ಚಳವಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು