News Karnataka Kannada
Wednesday, April 24 2024
Cricket
ವಿದೇಶ

ಒಂದೇ ಕುಟುಂಬದ ನಾಲ್ವರು ಕೊರೋನಾ ಗೆ ಬಲಿ

Photo Credit :

 ಒಂದೇ ಕುಟುಂಬದ ನಾಲ್ವರು ಕೊರೋನಾ ಗೆ ಬಲಿ

ಬಾಗಲಕೋಟೆ: ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಕೊರೊನಾದಿಂದ ಮೃತಪಟ್ಟಿದ್ದು, ಒಬ್ಬರ ಹಿಂದೆ ಮತ್ತೊಬ್ಬರನ್ನ ಈ ಹೆಮ್ಮಾರಿ ಬಲಿ ಪಡೆದಿದೆ.
ಪತಿ, ಪತ್ನಿ, ಅತ್ತೆ, ಮಾವ ನಾಲ್ವರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ(45), ವೆಂಕಟೇಶ್ ಪತ್ನಿ ಶಿಕ್ಷಕಿ ರಾಜೇಶ್ವರಿ(40), ಮಾವ(ರಾಜೇಶ್ವರಿ ಅಪ್ಪ) ರಾಮನಗೌಡ ಉದಪುಡಿ(74), ಅತ್ತೆ(ರಾಜೇಶ್ವರಿ ತಾಯಿ) ಹಾಗೂ ಲಕ್ಷ್ಮೀಬಾಯಿ(68) ಮೃತ ದುರ್ದೈವಿಗಳು.
ಮೇ 3 ರಿಂದ 15 ರ ಅವಧಿಯಲ್ಲಿ ಬಾಗಲಕೋಟೆ ನಗರದ ವಿವಿಧ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಇದ್ದರು. ರಾಜೇಶ್ವರಿ ಸಾಲಹಳ್ಳಿಯಲ್ಲಿ ಶಿಕ್ಷಕಿಯಾಗಿದ್ದು, ಪತಿ ವೆಂಕಟೇಶ್ ರಾಮದುರ್ಗದಲ್ಲಿ ಹಾಸ್ಟೇಲ್ ಸುಪ್ರಿಡೆಂಟ್ ಆಗಿದ್ದರು. ಹೀಗಾಗಿ ಪತ್ನಿ ಊರು ಸಾಲಹಳ್ಳಿಯಲ್ಲೆ ಮನೆ ಮಾಡಿದ್ರು. ವೆಂಕಟೇಶ್ ಅವರ ಮಾವ ನಿವೃತ್ತ ಶಿಕ್ಷಕರಾಗಿದ್ದು, ರಾಜೇಶ್ವರಿಗೆ ಮೊದಲು ಕರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಬಳಿಕ ರಾಜೇಶ್ವರಿ ತಂದೆ, ತಾಯಿ, ಪತಿ ಸೇರಿ ನಾಲ್ವರು ಕೊರೊನಾ ಚಿಕಿತ್ಸೆಗಾಗಿ ಬಾಗಲಕೋಟೆ ವಿವಿಧ ಖಾಸಗಿ ಆಸ್ಪತ್ರೆ ದಾಖಲಾಗಿದ್ರು. ಮೇ 3 ರಂದು ರಾಜೇಶ್ವರಿ ಮೃತಪಟ್ಟಿದ್ದಾರೆ. ಮೇ 5 ರಂದು ತಂದೆ ರಾಮನಗೌಡ, ಮೇ 12 ರಂದು ತಾಯಿ ಲಕ್ಷ್ಮೀಬಾಯಿ ಹಾಗೂ ಮೇ 15 ರಂದು ಪತಿ ವೆಂಕಟೇಶ್ ಕಣ್ಮುಚ್ಚಿದ್ದಾರೆ. ವೆಂಕಟೇಶ್ ಅವರ ಪತ್ನಿ ರಾಜೇಶ್ವರಿ ಇತ್ತೀಚೆಗೆ ಬೆಳಗಾವಿ ಉಪಚುನಾವಣೆಯಲ್ಲಿ ಎಲೆಕ್ಷನ್ ಡ್ಯೂಟಿ ಮಾಡಿದ್ರು. ಅಲ್ಲಿಂದ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆ ಬಳಿಕ ಎಲ್ಲರೂ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ವು. ಬಾಗಲಕೋಟೆ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ರು. ಎರಡು ವಾರದ ಅಂತರದಲ್ಲಿ ನಾಲ್ವರನ್ನು ಡೆಡ್ಲಿ ಕರೊನಾ ಬಲಿ ತೆಗೆದುಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು