News Karnataka Kannada
Wednesday, April 24 2024
Cricket
ವಿದೇಶ

ಒಂದೇ ಆಸ್ಪತ್ರೆಯ 80 ವೈದ್ಯರಿಗೆ ಕೊರೋನ ಸೋಂಕು

Photo Credit :

ಒಂದೇ ಆಸ್ಪತ್ರೆಯ 80 ವೈದ್ಯರಿಗೆ ಕೊರೋನ ಸೋಂಕು

ದೆಹಲಿ: ದೆಹಲಿಯ ಸರೋಜ್​ ಆಸ್ಪತ್ರೆಯ 80 ವೈದ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂಥ ಹೊತ್ತಲ್ಲೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಆಸ್ಪತ್ರೆಯ ಹಿರಿಯ ಸರ್ಜನ್​ ಅನಿಲ್​ಕುಮಾರ್ ರಾವತ್​ ಅವರೂ ಸಹ ಎರಡು ದಿನಗಳ ಹಿಂದೆ ಕೊರೊನಾದಿಂದಲೇ ಮೃತಪಟ್ಟಿದ್ದರು.

ಕೊವಿಡ್ ಸೋಂಕಿಗೆ ಒಳಗಾಗಿರುವ 80 ವೈದ್ಯರಲ್ಲಿ 12 ವೈದ್ಯರು ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

ಸದ್ಯ ಸರೋಜ್​ ಆಸ್ಪತ್ರೆಯಲ್ಲಿ ಒಪಿಡಿಯನ್ನು ಬಂದ್​ ಮಾಡಲಾಗಿದೆ. ದೆಹಲಿಯಾದ್ಯಂತ ಒಟ್ಟು 300 ವೈದ್ಯರಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಇನ್ನು ದೆಹಲಿಯ ಗುರು ತೇಜ್​ ಬಜದ್ದೂರ್​ ಆಸ್ಪತ್ರೆಯ ಯುವ ವೈದ್ಯ ಡಾ. ಅನಾಸ್​ ಮುಜಾಹಿದ್ದ ಅವರು ಕೊರೊನಾ ದೃಢಪಟ್ಟ ಒಂದೇ ತಾಸಿನಲ್ಲಿ ಸಾವನ್ನಪ್ಪಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು