News Karnataka Kannada
Monday, April 22 2024
Cricket
ವಿದೇಶ

ಎರಡ್ಮೂರು ವಾರಗಳಲ್ಲಿ ಸೊಂಕು ಹತೋಟಿಗೆ;ಡಾ.ಸುಧಾಕರ್

Photo Credit :

ಎರಡ್ಮೂರು ವಾರಗಳಲ್ಲಿ ಸೊಂಕು ಹತೋಟಿಗೆ;ಡಾ.ಸುಧಾಕರ್

ಬೆಂಗಳೂರು : ಯಾವುದೇ ಸೊಂಕು ಕಂಡುಬಂದರೂ ಮೊದಲು ನಗರ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯ. ಪ್ರಾರಂಭದಲ್ಲಿ ಇದು ಕ್ಯಾಪಿಟಲ್ ಸಿಟಿಯಲ್ಲಿ ಕಂಡು ಬರುತ್ತದೆ. ಕಾರಣ ಹೆಚ್ಚು ಮೂಮೆಂಟ್ ಇರುವ ನಗರ. ಆದ್ದರಿಂದ ಸೋಂಕು ಹೆಚ್ಚಾಗುತ್ತದೆ. ಮುಂಬೈ ಮಹಾರಾಷ್ಟ್ರದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಇವಾಗ ಅಲ್ಲಿ ಕಡಿಮೆ ಆಗಿದೆ ಅಂತಾರೆ. ಆದರೆ ಜಿಲ್ಲೆಗಳಲ್ಲಿ 20 ರಿಂದ 25 ಪರ್ಸೆಂಟ್ ಇದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಬಹುಶಃ ಎರಡ್ಮೂರು ವಾರಗಳಲ್ಲಿ ಸೊಂಕು ಹತೋಟಿಗೆ ಬರಲಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಏರಿಕೆ ಆಗಲಿದೆ. ಹೀಗಾಗಿ ಅಧಿಕಾರಿಗಳ ಜೊತೆ ವಿಸ್ತೃತವಾಗಿ ಸಮಾಲೋಚನೆ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗದಂತೆ ಸಿದ್ದತೆ ಮಾಡಿಕೊಳ್ಳಿ ಎಂದಿದ್ದೇನೆ. ದೊಡ್ಡ ನಗರಗಳಲ್ಲಿ ಇಷ್ಟು ಆರೋಗ್ಯ ವ್ಯವಸ್ಥೆ ಇದ್ದರೂ ಐಸಿಯು, ವೆಂಟಿಲೇಟರ್ ಕೊರತೆ ಉಂಟಾಯ್ತು. ಹಾಗಾಗಿ ಗ್ರಾಮೀಣ ಭಾಗದಲ್ಲಿ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಸರಿಯಾದ ಚಿಕಿತ್ಸೆ ನೀಡಬೇಕಾಗುತ್ತದೆ. ಈಗಿನಿಂದಲೇ ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಡೌನ್ ಹಾಸ್ಪಿಟಲ್ ಸೇರಿದಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದ್ದಿದ್ದೇನೆ ಎಂದರು.
ಮುಂದುವರೆದ ಅವರು, ಇಂದು ನಾನು ಹಲವು ತಾಲ್ಲೂಕು ಕೇಂದ್ರ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಕೆ ಆರ್ ಪುರ , ಹೊಸಕೋಟೆ , ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತೇನೆ. ನೇರವಾಗಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೆ, ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಸಿಗುತ್ತಿದೆ ಅಂತ ತಿಳಿಯುತ್ತೆ. ನಾವು ಹೋಗಿ ಭೇಟಿ ಕೊಡದೆ ಹೋದ್ರೆ, ಏನ್ ಸಮಸ್ಯೆಗಳು ಇವೆ ಅಂತ ತಿಳಿಯಲ್ಲ. ಹಾಗಾಗಿ ಖುದ್ದಾಗಿ ನಾನೇ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬಂದಿರುವೆ. ಅದೇ ರೀತಿ ಇಂದು ಕೆಲವು ಕಡೆ ಭೇಟಿ ಕೊಡುತ್ತಿದ್ದೇನೆ ಎಂದು ಹೇಳಿದರು.
ಬ್ಲಾಕ್ ಫಂಗಸ್ ಗೆ ಮಹಾರಾಷ್ಟ್ರ ದಲ್ಲಿ ಉಚಿತ ಚಿಕಿತ್ಸೆ ನೀಡುತ್ತಿರುವ ವಿಚಾರವಾಗಿ, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬ್ಲಾಕ್ ಫಂಗಸ್ ಚಿಕಿತ್ಸಾ ವಿಧಾನ ಹೇಗಿದೆ ಅನ್ನೋದನ್ನ ನೋಡಬೇಕು. ಉಚಿತವಾಗಿ ಚಿಕಿತ್ಸೆ ನೀಡುವ ಕುರಿತು ಸರ್ಕಾರದ ನಿಲುವು, ಹೀಗೆ ಎಲ್ಲವನ್ನೂ ನೋಡಬೇಕಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡಿ ಮೊದಲು ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ. ನಂತರ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಿ ಎರಡು ದಿನದಲ್ಲಿ ತೀರ್ಮಾನ ಮಾಡುತ್ತೇವೆ. ಇಡೀ ದೇಶದಲ್ಲಿ ಯಾವ ರಾಜ್ಯವಾದರೂ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ನೀಡ್ತಿದೆ ಎಂದರೆ ಅದು ಕರ್ನಾಟಕ. ಕಳೆದ ವರ್ಷ ಸುಮಾರು 350 ಕೋಟಿ ರೂ.ಅನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಖರ್ಚು ಮಾಡಲಾಗಿದೆ. ಉಚಿತ ಟೆಸ್ಟಿಂಗ್, ಕ್ವಾರಂಟೈನ್, ಕೋವಿಡ್ ಕೇರ್ ಸೆಂಟರ್ ಅಲ್ಲಿಯೂ ಉಚಿತವಾಗಿ ನೋಡಲಾಗಿದೆ. ಔಷಧವನ್ನೂ ಹಾಗೂ ಚಿಕಿತ್ಸೆಯನ್ನೂ ಉಚಿತವಾಗಿ ನೀಡುತ್ತಿದ್ದೇವೆ. ಆಸ್ಟ್ರೇಲಿಯಾ ಪ್ರಜೆಗಳು ಅಲ್ಲಿಗೆ ಹೋದರೆ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಅದು ಉಚಿತವಾಗಿ ಅಲ್ಲ ಒಂದು ಲಕ್ಷ ಕ್ವಾರಂಟೈನ್​ ಫೀಸ್ ನೀಡಬೇಕು ಎಂದರು.
ಡಬಲ್ ಮ್ಯೂಟೆಡ್ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಸುಧಾಕರ್, ಈಗಾಗಲೇ ಜಿನೋಲಾಜಿಕಲ್ ಸ್ಟಡೀಸ್ ಅದರ ಬಗ್ಗೆ ಸೀಕ್ವೆನ್ಸಿಂಗ್ ಮಾಡಿ ಎಂದಿದ್ದೇನೆ. ಈಗಾಗಲೇ ವಿದೇಶಗಳಲ್ಲಿ ಇದನ್ನು ಇಂಡಿಯನ್ ವೇರಿಯಂಟ್ ಎಂದು ಕರೆದಿದ್ದಾರೆ. ಇಂಡಿಯನ್ ವೇರಿಯಂಟ್ ಬ್ರಿಟಿಷ್ ವೇರಿಯಂಟ್ ಗಿಂತ ಸ್ವಲ್ಪ ವಿಭಿನ್ನವಾಗಿ ವರ್ತಿಸುತ್ತಿದೆ. ಅದರ ಗುಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿಶ್ವದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡುತ್ತಿವೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು