News Karnataka Kannada
Monday, April 15 2024
Cricket
ವಿದೇಶ

ಎನ್‌ಡಿಎಗೆ ಮತ್ತೊಂದು ಆಘಾತ– ಎಲ್‌ಕೆಪಿ ಸ್ವತಂತ್ರ ಸ್ಪರ್ಧೆ?

Photo Credit :

ಎನ್‌ಡಿಎಗೆ ಮತ್ತೊಂದು ಆಘಾತ– ಎಲ್‌ಕೆಪಿ ಸ್ವತಂತ್ರ ಸ್ಪರ್ಧೆ?

ನವದೆಹಲಿ: ಮಿತ್ರಪಕ್ಷಗಳನ್ನು ಕಳೆದುಕೊಳ್ಳುತ್ತಿರುವ ಎನ್‌ಡಿಎಗೆ ಬಿಹಾರ ವಿಧಾನಸಭಾ ಚುನಾವಣೆ ಮತ್ತೊಂದು ಅಘಾತ ನೀಡಿದೆ.

ಸ್ಥಾನ ಹಂಚಿಕೆಯ ವಿಷಯವಾಗಿ ಅಸಮಾಧಾನ ಹೊಂದಿದ್ದ ಎಲ್‌ಜೆಪಿ ಹೆಚ್ಚಿನ ಸ್ಥಾನದಲ್ಲಿ ಸ್ಪರ್ಧಿಸುವ ಬೇಡಿಕೆ ಮುಂದಿಟ್ಟಿತ್ತು. ಕಳೆದ ಬಾರಿ ಮಹಾಘಟಬಂಧನ್‌ನಲ್ಲಿ ಗುರುತಿಸಿಕೊಂಡಿದ್ದ ಜೆಡಿಯು ಈ ಬಾರಿ ಎನ್‌ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವುದು ಎಲ್ ಜೆಪಿ- ಬಿಜೆಪಿ- ಜೆಡಿಯು ನಡುವಿನ ಸ್ಥಾನ ಹಂಚಿಕೆ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಎನ್ ಡಿಎ ಮೈತ್ರಿಕೂಟದಿಂದ ಎಲ್ ಜೆಪಿ ಹೊರ ನಡೆಯುತ್ತದೆ ಎಂಬ ವದಂತಿಗಳ ನಡುವೆಯೇ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪಕ್ಷದ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಎಲ್‌ಜೆಪಿ ಎನ್‌ಡಿಎ ಜೊತೆ ಮೈತ್ರಿಯನ್ನು ತೊರೆದು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು