News Karnataka Kannada
Tuesday, April 23 2024
Cricket
ವಿದೇಶ

ಎಎಂಯು ; 20 ದಿನಗಳಲ್ಲಿ 26 ಪ್ರಾಧ್ಯಾಪಕರು ಕೋವಿಡ್​ಗೆ ಬಲಿ

Photo Credit :

 ಎಎಂಯು ; 20 ದಿನಗಳಲ್ಲಿ 26 ಪ್ರಾಧ್ಯಾಪಕರು ಕೋವಿಡ್​ಗೆ ಬಲಿ

ನವದೆಹಲಿ: ಅಲಿಗಢ ಮುಸ್ಲಿಂ ವಿವಿಯಲ್ಲಿ 26 ಪ್ರಾಧ್ಯಾಪಕರು ಸೇರಿದಂತೆ ಸುಮಾರು 44 ಸಿಬ್ಬಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ರೂಪಾಂತರವು ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.ಕೋವಿಡ್‌ಗೆ ಪ್ರಾಣ ಕಳೆದುಕೊಂಡ 26 ಪ್ರಾಧ್ಯಾಪಕರಲ್ಲಿ 10 ನಿವೃತ್ತ ಅಧ್ಯಾಪಕರು ಸೇರಿದ್ದಾರೆ. ವಿಶ್ವವಿದ್ಯಾಲಯದ ಕೋರಿಕೆಯ ಮೇರೆಗೆ ಸಿಬ್ಬಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾದರಿಗಳನ್ನು ಪರೀಕ್ಷೆಗೆ ದೆಹಲಿಯ ಸಿಎಸ್‌ಐಆರ್ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: 2 ವರ್ಷದ ಮಕ್ಕಳ ಮೇಲೆ ಕೋವಾಕ್ಸಿನ್​ ಲಸಿಕೆ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸುಎಎಮ್‌ಯು ಐಸಿಎಂಆರ್‌ಗೆ ಪತ್ರವೊಂದನ್ನು ಬರೆದಿದ್ದು, ಕೋವಿಡ್ ಮಾದರಿಗಳ ಜೀನೋಮ್ ಅಧ್ಯಯನ ವರದಿಯನ್ನು ತುರ್ತಾಗಿ ರವಾನಿಸುವಂತೆ ತಿಳಿಸಿದೆ. ಈ ಅಧ್ಯಯನದಿಂದ, ಕೋವಿಡ್‌ ಹೊಸ ರೂಪಾಂತರವು ವಿಶ್ವವಿದ್ಯಾಲಯದಲ್ಲಿ ಹರಡಿದೆಯೇ? ಎಂದು ಕಂಡುಹಿಡಿಯಬಹುದು.ಪೋಸ್ಟ್ ಹಾರ್ವೆಸ್ಟ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಮೊಹಮ್ಮದ್ ಅಲಿ ಖಾನ್ (60), ರಾಜಕೀಯ ವಿಜ್ಞಾನ ವಿಭಾಗದ ಪ್ರೊ.ಕಾಜಿ ಮೊಹಮ್ಮದ್ ಜಮ್ಶೆಡ್ (55), ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸಾಜಿದ್ ಅಲಿ ಖಾನ್ (63), ಮ್ಯೂಸಿಯಂ ಇಲಾಖೆಯ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ (62) ಸೇರಿ ಸುಮಾರು 44 ಜನ ಕೋವಿಡ್​ಗೆ ಬಲಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು