News Karnataka Kannada
Monday, April 22 2024
Cricket
ವಿದೇಶ

ಉಪ ಚುನಾವಣೆ ಫಲಿತಾಂಶ: ಬೆಳಗಾವಿ: ಬಿಜೆಪಿ ಮನ್ನಡೆ, ಮಂಗಲಾ ಅಂಗಡಿಗೆ 87468, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿಗೆ 83927 ಮತ

Photo Credit :

ಉಪ ಚುನಾವಣೆ ಫಲಿತಾಂಶ: ಬೆಳಗಾವಿ: ಬಿಜೆಪಿ ಮನ್ನಡೆ, ಮಂಗಲಾ ಅಂಗಡಿಗೆ 87468, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿಗೆ 83927 ಮತ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮನ್ನಡೆ ಕಾಯ್ದುಕೊಂಡಿದೆ. ಬಿಜೆಪಿಯ ಮಂಗಲಾ ಅಂಗಡಿ 87468 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 83927 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಮಂಗಲಾ ಅಂಗಡಿ 3541 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಬೀದರ್: ಬಸವ ಕಲ್ಯಾಣ ಉಪಚುನಾವಣೆಯ ಐದನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ 7152 ಮತಗಳ ಮುನ್ನಡೆ ಸಾಧಿಸಿದ್ದಾರೆ‌.ಶರಣು ಸಲಗರ 15,052 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 7900, ಜೆಡಿಎಸ್ ನ ಸಯ್ಯದ್ ಯಶ್ರಬ್ 1158 ಮತಗಳನ್ನು ಪಡೆದರು.
ರಾಯಚೂರು: ಮಸ್ಕಿ‌ ವಿಧಾನಸಭೆ ಉಪಚುನಾವಣೆಯ ಆರು ಸುತ್ತಿನ‌ ಮತಗಳ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಸತತ ಮುನ್ನಡೆ ಸಾಧಿಸುತ್ತಿದ್ದಾರೆ.ನಾಲ್ಕನೇ ಸುತ್ತಿನಲ್ಲಿ‌ 1477, ಐದನೇ ಸುತ್ತಿನಲ್ಲಿ 1173 ಹಾಗೂ 1647 ಮತಗಳಿಂದ ಕಾಂಗ್ರೆಸ್ ಮುನ್ನಡೆಯಲ್ಲಿದೆ.ಇದುವರೆಗಿನ ಒಟ್ಟು ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಒಟ್ಟು 7,047 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು