News Karnataka Kannada
Friday, April 19 2024
Cricket
ವಿದೇಶ

ಉದ್ಯೋಗಿಗಳಿಗೆ ವೇತನ ರಹಿತ ರಜೆ ತೆಗೆದುಕೊಳ್ಳಲು ಇಂಡಿಗೋ ಸೂಚನೆ

Photo Credit :

ಉದ್ಯೋಗಿಗಳಿಗೆ ವೇತನ ರಹಿತ ರಜೆ ತೆಗೆದುಕೊಳ್ಳಲು ಇಂಡಿಗೋ ಸೂಚನೆ

ನವ ದೆಹಲಿ : ಕೋವಿಡ್ ನ ಪರಿಸ್ಥಿತಿಯಿಂದಾಗಿ ಎಲ್ಲಾ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳು ಹರಸಾಹಸಪಡುತ್ತಿವೆ.

ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಎರಡನೇ ಅಲೆಯಿಂದಾಗಿ ಇಂಡಿಗೋ ತನ್ನ ಹಿರಿಯ ಉದ್ಯೋಗಿಗಳಿಗೆ ಸೆಪ್ಟೆಂಬರ್‌ ವರೆಗೆ ತಿಂಗಳಿಗೆ ನಾಲ್ಕು ದಿನಗಳು ವೇತನರಹಿತವಾಗಿ ಕಡ್ಡಾಯ ರಜೆ (ಎಲ್ ಡಬ್ಲ್ಯು ಪಿ) ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಕೋವಿಡ್ ಸೋಂಕಿನ ಕಾರಣದಿಂದಾಗಿ ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ಬಹುತೇಕ ವಿಮಾನಯಾನ ಸಂಸ್ಥೆಗಳು ದೊಡ್ಡ ಪ್ರಮಾಣದ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಇಂಡಿಗೋ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

ಈ ಬಗ್ಗೆ ಪೈಲೆಟ್‌ ಗಳಿಗೆ ಮಿಂಚಂಚೆ ಅಥವಾ ಇಮೇಲ್‌ ಮೂಲಕ ಮಾಹಿತಿ ನೀಡಿದ ಇಂಡಿಗೊದ ಫ್ಲೈಟ್ ಆಪರೇಶನ್ಸ್ ಹಿರಿಯ ಉಪಾಧ್ಯಕ್ಷ ಅಶೀಮ್ ಮಿತ್ರ, ಕೋವಿಡ್ ಸೋಂಕಿನ ಎರಡನೇ ಅಲೆ ಎಲ್ಲಾ ಕ್ಷೇತ್ರಗಳಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹೊಡೆತವನ್ನು ನೀಡಿದೆ. ವಿಮಾನಯಾನ ಮಾಡುವ ಪ್ರಯಾಣಿಕರು ಈ ಕೋವಿಡ್ ನ ಕಾರಣದಿಂದಾಗಿ ಕಡಿಮೆಯಾಗಿದ್ದಾರೆ. ಇದು ನಮ್ಮ ಆರ್ಥಿಕ ಹಾಗೂ ವಾಣಿಜ್ಯ ವಹಿವಾಟಿನ ಮೇಲೂ ಕೂಡ ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಈಡಾಗುವ ಹಾಗೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ವಿಮಾನಯಾನದ ಬಹುಪಾಲು ಉದ್ಯೋಗಿಗಳು ಬ್ಯಾಂಡ್ ಬಿ ಮತ್ತು ಬ್ಯಾಂಡ್ ಎ ನಲ್ಲಿದ್ದಾರೆ, ಅವುಗಳು ಕೆಳಮಟ್ಟದ ಬ್ಯಾಂಡ್‌ ಗಳಾಗಿವೆ. ಹೀಗಾಗಿ 2021ರ ಜೂನ್ 1 ರಿಂದ ಮುಂದಿನ 3 ತಿಂಗಳವರೆಗೆ ಅಂದರೇ, ಸಂಪ್ಟೆಂಬರ್ ತನಕ ತಿಂಗಳಲ್ಲಿ 4 ದಿನಗಳ ಕಡ್ಡಾಯ ವೇತನವಿಲ್ಲದೆ ರಜೆ ತೆಗೆದುಕೊಳ್ಳಬೇಕೆಂದು ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ಇಮೇಲ್ ನಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು