News Karnataka Kannada
Wednesday, April 24 2024
Cricket
ವಿದೇಶ

ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳ ಮೇಲೆ ಇಸ್ರೇಲ್ ದಾಳಿ

Photo Credit :

ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳ ಮೇಲೆ  ಇಸ್ರೇಲ್ ದಾಳಿ

ಗಾಜಾ ಸಿಟಿ: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಇಂದು ಇಸ್ರೇಲ್ ಸೇನೆ ಗಾಜಾ ಪ್ರದೇಶದಲ್ಲಿ ಏರ್ ಸ್ಟ್ರೈಕ್ ನಡೆಸಿ 15 ಕಿ.ಮೀ. ಉದ್ದದ ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳನ್ನು ನಾಶಪಡಿಸಿದೆ.

 

ಇಸ್ರೇಲ್ ಸೇನೆ ಕಳೆದ ಒಂದು ವಾರದಿಂದ ಗಾಜಾ ಸಿಟಿ ಮೇಲೆ ನಿಂತರ ದಾಳಿ ನಡೆಸುತ್ತಿದೆ. ಇಸ್ರೇಲಿ ಮಿಲಿಟರಿ ಹಮಾಸ್‌ನ ಉಗ್ರಗಾಮಿಗಳ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ.

 

ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದು ಮೂರು ಕಟ್ಟಡಗಳು ನೆಲಸಮಗೊಂಡಿವೆ. ಬೆಳಗ್ಗಿನ ಸ್ಟ್ರೈಕ್‌ ನಿಂದ ಮೃತಪಟ್ಟವರ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಗಾಜಾ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾಗಿದೆ.

 

ಗಾಜಾದ ಪ್ಯಾಲೇಸ್ಟಿನಿಯನ್ ಉಗ್ರರು ಇಸ್ರೇಲ್‌ ಮೇಲೆ 3,100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದಾರೆ. ಗಾಜಾದಲ್ಲಿ ನೂರಾರು ವೈಮಾನಿಕ ದಾಳಿಯಲ್ಲಿ ಕನಿಷ್ಠ 188 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 55 ಮಕ್ಕಳು ಮತ್ತು 33 ಮಹಿಳೆಯರು ಸೇರಿದ್ದಾರೆ, 1,230 ಜನರು ಗಾಯಗೊಂಡಿದ್ದಾರೆ. ಇತ್ತ ಇಸ್ರೇಲ್ ಕಡೆ 5 ವರ್ಷದ ಬಾಲಕ ಮತ್ತು ಯೋಧ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು