News Karnataka Kannada
Sunday, April 21 2024
Cricket
ವಿದೇಶ

ಇಷ್ಟವಿಲ್ಲದ ಮದುವೆ ಭಯಕ್ಕೆ ಪ್ರಾಣ ಕಳೆದುಕೊಂಡ ಯುವತಿ

Photo Credit :

ಇಷ್ಟವಿಲ್ಲದ ಮದುವೆ ಭಯಕ್ಕೆ ಪ್ರಾಣ ಕಳೆದುಕೊಂಡ ಯುವತಿ

ಮೆಹಬೂಬ್​ನಗರ: ಮದುವೆ ಮಾಡಲು ವರನ ಹುಡುಕಾಟದಲ್ಲಿರುವ ಸಂದರ್ಭದಲ್ಲಿ ಪಾಲಕರು ತನಗಿಷ್ಟವಿಲ್ಲದ ಮದುವೆ ಮಾಡಿಬಿಡುತ್ತಾರೆಂಬ ಬೇಸರದಿಂದ ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಮೆಹಬೂಬ್​ನಗರದಲ್ಲಿ ನಡೆದಿದೆ.
ಸುನಿತಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಮೆಹಬೂಬ್​ನಗರ ಜಿಲ್ಲೆಯ ಚಿನ್ನಚಿಂತಕುಂಟ ವಲಯದ ಮದ್ದೂರ್​ ಗ್ರಾಮದ ನಿವಾಸಿ. ಸುನಿತಾಗೆ ಮದುವೆ ಮಾಡಲು ಆಕೆಯ ಪಾಲಕರು ವರನ ಹುಡುಕಾಟದಲ್ಲಿ ಇದ್ದರು. ಇನ್ನು ಕೆಲವೇ ದಿನಗಳಲ್ಲಿ ಮದುವೆ ಬಿಡುತ್ತಾರೆಂಬ ಭಯದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿಷ ಸೇವಿಸಿದ್ದನ್ನು ಮನಗಂಡು ಪಾಲಕರು ತಕ್ಷಣ ಸುನಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೋಮಾಗೆ ಜಾರಿದ್ದ ಸುನಿತಾ ಆಸ್ಪತ್ರೆಗೆ ದಾಖಲಿಸಿದ ದಿನವೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.
ಈ ಸಂಬಂಧ ಶುಕ್ರವಾರ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು