News Karnataka Kannada
Thursday, April 25 2024
Cricket
ವಿದೇಶ

ಇರಾನ್‌ನ ಭಾರೀ ಯುದ್ಧನೌಕೆ ಖಾರ್ಗ್ ಬೆಂಕಿಗೆ ಆಹುತಿ

Photo Credit :

ಇರಾನ್‌ನ ಭಾರೀ ಯುದ್ಧನೌಕೆ ಖಾರ್ಗ್ ಬೆಂಕಿಗೆ ಆಹುತಿ

ಟೆಹ್ರಾನ್ : ಇರಾನ್‌ನ ಭಾರೀ ಯುದ್ಧನೌಕೆ ‘ ಖಾರ್ಗ್ ‘ ಬೆಂಕಿಗೆ ಆಹುತಿಯಾಗಿದ್ದು , ಒಮಾನ್ ಗಲ್ಸ್ ಪ್ರದೇಶದಲ್ಲಿ ಮುಳುಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ . 

 

ಬುಧವಾರ ಬೆಳಗಿನ ಜಾವ 2.25 ರ ಸುಮಾರಿಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತು . ಬೆಂಕಿ ನಂದಿಸುವ ಯತ್ನ ವಿಫಲವಾಯಿತು ಎಂದು ಫಾರ್ಸ್ ಸುದ್ದಿ ಸಂಸ್ಥೆ ಹೇಳಿದೆ .

 

1977 ರಲ್ಲಿ ಬ್ರಿಟನ್‌ನಲ್ಲಿ ನಿರ್ಮಾಣವಾದ ಈ ಯುದ್ಧನೌಕೆ 1984 ರಲ್ಲಿ ಇರಾನ್‌ಗೆ ಹಸ್ತಾಂತರಗೊಂಡಿತ್ತು. ಈ ಘಟನೆ ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿಯಲ್ಲಿ ಜಾಸ್ಟ್ ಬಂದರಿನ ಸಮೀಪ ಹಡಗು ಮುಳುಗಿತು ಎಂದು ಹೇಳಲಾಗಿದ್ದು, ಈ ದುರಂತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ .  

 

 ಪ್ರಮುಖ ಸರಕು ಸಾಗಣೆ ನೌಕೆಯಾಗಿ ಹಾಗೂ ಹೆಲಿಕಾಪ್ಟರ್‌ಗಳ ಚಿಮ್ಮು ಹಲಗೆಯಾಗಿ ಇದು ಬಳಕೆಯಾಗುತ್ತಿತ್ತು . ಇರಾನ್ ನೌಕಾಪಡೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಮೂರನೇ ದೊಡ್ಡ ದುರಂತ ಇದು. 2020 ರಲ್ಲಿ ಜಸ್ಟ್ ಬಂದರಿನ ಬಳಿ ಕ್ಷಿಪಣಿಯೊಂದು ಅಚಾತುರ್ಯದಿಂದ ನೌಕಾಪಡೆಯ ಹಡಗೊಂದಕ್ಕೆ ಅಪ್ಪಳಿಸಿದ್ದರಿಂದ 19 ಮಂದಿ ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದರು . 2018 ರಲ್ಲಿ ನೌಕಾಪಡೆಯ ಯುದ್ಧನೌಕೆಯೊಂದು ಕ್ಯಾಸ್ಪಿಯನ್ ಸಮುದ್ರದಲ್ಲಿ ಮುಳುಗಿತ್ತು ಎಂದು ವರದಿಗಳು ತಿಳಿಸಿವೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು