News Karnataka Kannada
Sunday, April 14 2024
Cricket
ವಿದೇಶ

ಇನ್ನೆರಡು ದಿನಕ್ಕೆ ಹಸೆ ಮಣೆ ಏರಬೇಕಿದ್ದ ಯುವಕ ಕೊರೋನಾ ಗೆ ಬಲಿ

Photo Credit :

ಇನ್ನೆರಡು ದಿನಕ್ಕೆ ಹಸೆ ಮಣೆ ಏರಬೇಕಿದ್ದ ಯುವಕ ಕೊರೋನಾ ಗೆ ಬಲಿ

ಮೈಸೂರು: ಮದುವೆ ನಿಗದಿಯಾಗಿದ್ದ ಯುವಕ ಕೊರೊನಾಗೆ ಬಲಿಯಾಗಿರುವ ಘಟನೆ ಇಲ್ಲಿನ ಹೆಬ್ಬಾಳುವಿನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ನವೀನ್‌ (31) ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಂಪನಿ‌ ಉದ್ಯೋಗಿಯಾಗಿದ್ದು ಮಾ.7 ರಂದು ನಿಶ್ಚಿತಾರ್ಥವಾಗಿತ್ತು. ಮೇ 19 ಮತ್ತು 20 ಮದುವೆ ದಿನಾಂಕವೂ ಫಿಕ್ಸ್‌ ಆಗಿತ್ತು. ಇವರಿಗೆ ಕೆಮ್ಮು ಕಾಣಿಸಿಕೊಂಡ‌ ಕಾರಣ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಬಳಿಕ ಉಸಿರಾಟದ ತೊಂದರೆಯೂ ಉಂಟಾಗಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ನವೀನ್ ಅಣ್ಣ ಹಾಗೂ ಅತ್ತಿಗೆಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸದ್ಯ ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು