News Karnataka Kannada
Monday, April 22 2024
Cricket
ವಿದೇಶ

ಇದೇ ಮೊದಲ ಬಾರಿಗೆ ಭಾರತದಲ್ಲಿ ಕಡಿಮೆಯಾದ ಚಿನ್ನದ ಬೇಡಿಕೆ

Photo Credit :

ಇದೇ ಮೊದಲ ಬಾರಿಗೆ ಭಾರತದಲ್ಲಿ ಕಡಿಮೆಯಾದ ಚಿನ್ನದ ಬೇಡಿಕೆ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆ ಅಲೆ ಅಬ್ಬರದಿಂದಾಗಿ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಚಿನ್ನದ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ.

 

 ಇದೇ ಮೊದಲ ಬಾರಿಗೆ ರಿಯಾಯಿತಿ ದರದಲ್ಲಿ ಚಿನ್ನ ಮಾರಾಟವಾಗುತ್ತಿದ್ದು, ಖರೀದಿದಾರರು ದೂರವುಳಿದ ಕಾರಣ ಭಾರತದಲ್ಲಿ ಅನೇಕ ಆಭರಣ ಮಳಿಗೆಗಳು ಮುಚ್ಚಲ್ಪಟ್ಟಿವೆ. ಹಾಗೇಯೇ ಚಿನ್ನದ ಬೇಡಿಕೆಯೂ ಕಡಿಮೆಯಾಗುತ್ತಿದೆ ಮುಂಬೈ ಮೂಲದ ವ್ಯಾಪಾರಿ ಹೇಳಿದ್ದಾರೆ. 

 

ಕಳೆದ ವಾರ ಚಿನ್ನಕ್ಕೆ 2 ಡಾಲರ್ ನಷ್ಟು ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಶೇಕಡ 10.75 ರಷ್ಟು ಆಮದು ಮತ್ತು ಶೇಕಡ 3 ರಷ್ಟು ಮಾರಾಟ ತೆರಿಗೆ ಒಳಗೊಂಡಿವೆ. ಅಧಿಕೃತ ದೇಶಿಯ ಬೆಲೆಗಿಂತ ಔನ್ಸ್ ಗೆ 2 ಡಾಲರ್ ನಷ್ಟು ರಿಯಾಯಿತಿ ನೀಡಲಾಗಿದೆ.

 

ಜೂನ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬಳಕೆ ಕುಂಠಿತಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವ ಚಿನ್ನ ಮಂಡಳಿ ತಿಳಿಸಿದೆ. ಆದರೆ ಇದೇ ವೇಳೆ ಅನೇಕ ದೇಶಗಳಲ್ಲಿ ವ್ಯತಿರಿಕ್ತ ಬೆಳವಣಿಗೆ ನಡೆದಿವೆ. ಚೀನಾದಲ್ಲಿ ಕಳೆದ ವಾರಕ್ಕಿಂತ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಕೊರೋನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಹೀಗಾಗಿ ಚೀನಾದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಮೇ 1 ರಿಂದ 5 ರವರೆಗೆ ಚೀನಾದಲ್ಲಿ ಕಾರ್ಮಿಕರ ದಿನಾಚರಣೆ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಿದೆ. ಸಿಂಗಾಪುರದಲ್ಲಿ ಚಿನ್ನಕ್ಕೆ ಬೇಡಿಕೆ ಇದೆ. ಹಾಂಕಾಂಗ್, ಜಪಾನ್ ನಲ್ಲಿಯೂ ರಜಾದಿನಗಳ ನಡುವೆಯೂ ಚಿನ್ನ ಮಾರಾಟ ಮುಂದುವರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು