News Karnataka Kannada
Friday, April 19 2024
Cricket
ವಿದೇಶ

ಇದುವರೆಗೂ ಒಂದೂ ಕೊರೋನಾ ಸೋಂಕು ಕಂಡುಬಂದಿಲ್ಲ ಉತ್ತರ ಕೊರಿಯಾ!

Photo Credit :

ಇದುವರೆಗೂ ಒಂದೂ  ಕೊರೋನಾ ಸೋಂಕು ಕಂಡುಬಂದಿಲ್ಲ ಉತ್ತರ ಕೊರಿಯಾ!

ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದ ಉತ್ತರ ಕೊರಿಯಾ. 

 

ಇಡೀ ಜಗತ್ತೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿದೆ. ಅಂತಹುದರಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂಕು ಪತ್ತೆಯಾಗಿಲ್ಲ ಎಂದು ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.

 

ಏಪ್ರಿಲ್ ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೋನಾ ವೈರಸ್ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಏಪ್ರಿಲ್ 23-29ರ ಅವಧಿಯಲ್ಲಿ ಪರೀಕ್ಷಿಸಲಾದ 751 ಜನರ ಪೈಕಿ 139 ಜನರಿಗೆ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು ಅಥವಾ ತೀವ್ರ ಉಸಿರಾಟದ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇದು ಕೊರೋನಾ ಸೋಂಕು ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಉತ್ತರ ಕೊರಿಯಾ ಸರ್ಕಾರ ತಿಳಿಸಿದೆ. 

 

ಈ ಮಾತುಗಳು ಈಗ ಅನುವಾನಕ್ಕೆ ಗುರಿಯಾಗಿದ್ದು, ಉತ್ತರ ಕೊರಿಯಾ ಚೀನಾದೊಂದಿಗೆ ಆರೋಗ್ಯ ಮೂಲಸೌಕರ್ಯ ಹಂಚಿಕೊಂಡಿದೆ. ಜಗತ್ತಿನಲ್ಲಿ ಮೊದಲು ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದೇ ಚೀನಾದಲ್ಲಿ. ಹೀಗಿರುವಾಗ ಉತ್ತರ ಕೊರಿಯಾದಲ್ಲಿ ಸೋಂಕಿತರು ಇಲ್ಲ ಎಂಬ ಕಿಮ್ ಜಾಂಗ್ ಉನ್ ಸರ್ಕಾರದ ಹೇಳಿಕೆ ಅನುಮಾನಕ್ಕೀಡಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು