News Karnataka Kannada
Sunday, April 14 2024
Cricket
ವಿದೇಶ

ಇದಾಹೊ ತೋಳಗಳನ್ನು ಹತ್ಯೆ ಮಾಡಲು ಮಸೂದೆಗೆ ಅನುಮೋದನೆ

Photo Credit :

ಇದಾಹೊ ತೋಳಗಳನ್ನು ಹತ್ಯೆ ಮಾಡಲು ಮಸೂದೆಗೆ ಅನುಮೋದನೆ

ಬೊಯ್ಸ್‌: ಇದಾಹೊ ತೋಳಗಳನ್ನು ಕೊಲ್ಲಲು ಗುತ್ತಿಗೆದಾರರ ನೇಮಕಕ್ಕೆ ಅನುಮತಿ ನೀಡುವ ಮಸೂದೆಗೆ ಉತ್ತರ ಅಮೆರಿಕದ ಇದಾಹೊ ಸಂಸತ್‌ ಅನುಮೋದನೆ ನೀಡಿದೆ.

ಈ ಕಾಯ್ದೆ ಜಾರಿಗೆ ಬಂದರೆ, ಇದಾಹೊ ತೋಳಗಳ ಸಂಖ್ಯೆ ಶೇ 90ರಷ್ಟು ಕಡಿಮೆಯಾಗಲಿದೆ

ಸಂಸತ್‌ನಲ್ಲಿ ಮಂಡನೆಯಾದ ಈ ಮಸೂದೆಯನ್ನು 58-11 ಮತಗಳಿಂದ ಅಂಗೀಕರಿಸಲಾಯಿತು. ನಂತರ ಈ ಮಸೂದೆಯನ್ನು ಅನುಮೋದನೆಗಾಗಿ ಗವರ್ನರ್‌ ಬ್ರ್ಯಾಡ್‌ ಲಿಟಲ್‌ ಅವರಿಗೆ ಕಳುಹಿಸಲಾಗಿದೆ.

ಈಗ ಇದಾಹೊ ತೋಗಳಗಳ ಸಂಖ್ಯೆ 1,500 ಅಧಿಕ ಇದೆ. ಅವುಗಳನ್ನು ಕೊಲ್ಲಲು ಅನುವು ಮಾಡಿಕೊಡುವ ಶಾಸನ ಜಾರಿಗೊಂಡರೆ, ಅವುಗಳ ಸಂಖ್ಯೆ 150ಕ್ಕೆ ಇಳಿಯುವುದು. ಇದರಿಂದ ಹಸು, ಕುರಿ ಹಾಗೂ ಇತರ ವನ್ಯಮೃಗಗಳ ಮೇಲೆ ನಡೆಯುತ್ತಿದ್ದ ತೋಳಗಳ ದಾಳಿ ತಪ್ಪಲಿದೆ ಎಂದು ಈ ಮಸೂದೆಯನ್ನು ಬೆಂಬಲಿಸುವ ಸಂಸದರು ಹೇಳಿದರು.

‘ಈ ತೋಳಗಳು ಕಡವೆ, ಜಿಂಕೆ ಹಾಗೂ ದನಗಾಹಿಗಳ ಮೇಲೆ ದಾಳಿ ಮಾಡುತ್ತಿದ್ದವು. ನೂತನ ಕಾಯ್ದೆಯು ತೋಳಗಳ ಸಂಖ್ಯೆಯನ್ನು ನಿಯಂತ್ರಿಸಲು ತೋಳಗಳ ನಿಯಂತ್ರಣ ಮಂಡಳಿಗೆ ಅಧಿಕಾರ ನೀಡುವುದು’ ಎಂದು ಸದನದ ನಾಯಕ ಮೈಕ್‌ ಮೊಯ್ಲ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು