News Karnataka Kannada
Sunday, April 14 2024
Cricket
ವಿದೇಶ

ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆ: 14 ರೋಗಿಗಳು ಅಪಾಯದಿಂದ ಪಾರು

Photo Credit :

ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆ: 14 ರೋಗಿಗಳು ಅಪಾಯದಿಂದ ಪಾರು

ಔರಂಗಾಬಾದ್‌: ‘ಮಹಾರಾಷ್ಟ್ರದ ಪರ್ಭಣಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಸುವ ಪೈಪ್‌ಲೈನ್‌ ಮೇಲೆ ಮರದ ಕೊಂಬೆ ಬಿದ್ದು, ಆಮ್ಲಜನಕ ಸೋರಿಕೆ ಉಂಟಾಗಿತ್ತು. ಈ ವೇಳೆ ಅಪಾಯದಲ್ಲಿ ಸಿಲುಕಿದ್ದ 14 ರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿ ರಕ್ಷಿಸಿದ್ದಾರೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.‘ಮಂಗಳವಾರ ರಾತ್ರಿ ಆಸ್ಪತ್ರೆಯ ಸಿಬ್ಬಂದಿ ಆಮ್ಲಜನಕ ಸೋರಿಕೆಯನ್ನು ಗಮನಿಸಿದ್ದಾರೆ. ಆ ಕೂಡಲೇ ಅವರು ರೋಗಿಗಳನ್ನು ರಕ್ಷಿಸಿ, ಅವರಿಗೆ ಉಸಿರಾಟಕ್ಕಾಗಿ ಜಂಬೋ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಅಳವಡಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಂಜಯ್ ಕುಂದೇತ್ಕರ್ ಅವರು ಹೇಳಿದರು.
‘ಆಮ್ಲಜನಕ ಶೇಖರಣಾ ಟ್ಯಾಂಕ್‌ನಿಂದ ತುರ್ತು ಚಿಕಿತ್ಸಾ ವಿಭಾಗಕ್ಕೆ ಆಮ್ಲಜನಕ ಪೂರೈಸುತ್ತಿದ್ದ ಪೈಪ್‌ಲೈನ್‌ ಮೇಲೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮರದ ಕೊಂಬೆಯೊಂದು ಬಿದ್ದಿದೆ. ಇದರಿಂದಾಗಿ ಆಮ್ಲಜನಕದಲ್ಲಿ ಸೋರಿಕೆಯಾಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ 14 ರೋಗಿಗಳಿಗೆ ಜಂಬೋ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಅಳವಡಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.
‘2–3 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಲ್ಲಿ ತಡೆಯುಂಟಾಗಿದೆ. ಆದರೆ ಪೈಪ್‌ಲೈನ್‌ ಅನ್ನು 2 ಗಂಟೆಯೊಳಗೆ ರಿಪೇರಿ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ. ಆಮ್ಲಜನಕ ಪೂರೈಕೆಯನ್ನು ಬೆಳಿಗ್ಗೆ 4 ಗಂಟೆಯೊಳಗೆ ಮರುಸ್ಥಾಪಿಸಲಾಯಿತು’ ಎಂದು ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು