News Karnataka Kannada
Saturday, April 13 2024
Cricket
ವಿದೇಶ

ಆಸ್ಪತ್ರೆಯಲ್ಲಿ ಆಕ್ಸಿಜನ್ ಲೀಕೇಜ್ – ನೆರವಿತ್ತ ಸೋನು ಸೂದ್ ಚಾರಿಟೆಬಲ್ ಟ್ರಸ್ಟ್

Photo Credit :

 ಆಸ್ಪತ್ರೆಯಲ್ಲಿ ಆಕ್ಸಿಜನ್ ಲೀಕೇಜ್ –     ನೆರವಿತ್ತ ಸೋನು ಸೂದ್ ಚಾರಿಟೆಬಲ್ ಟ್ರಸ್ಟ್

ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಒಂದೊಂದೇ ಅವಾಂತರಗಳು ಸೃಷ್ಟಿಯಾಗುತ್ತಿವೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಈ ಮಧ್ಯೆ ಮಹಾಲಕ್ಷ್ಮಿ ಲೇಔಟ್‍ನ ಶ್ರೇಯಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಲೀಕೇಜ್ ಆಗಿದೆ.ಹೌದು. ತಡರಾತ್ರಿ ಆಕ್ಸಿಜನ್ ಫ್ಲಾಂಟ್‍ನಲ್ಲಿ ಲೀಕೇಜ್ ಆಗಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಶ್ರೇಯಸ್ ಆಸ್ಪತ್ರೆಯ ಐಸಿಯುನಲ್ಲಿ ಸುಮಾರು 30ಕ್ಕೂ ಹೆಚ್ಚು ರೋಗಿಗಗಳು ಇದ್ದರು. ಈ ವೇಳೆ ದಿಢೀರನೆ ಎದುರಾದ ಆಕ್ಸಿಜನ್ ಕೊರತೆ ಉಂಟಾಗಿದೆ.
ಇತ್ತ ಅಗ್ನಿಶಾಮಕ ದಳದ ಜೊತೆಗೆ ಮಾಹಿತಿ ತಿಳಿದ ತಕ್ಷಣವೇ ಸೋನು ಸೂದ್ ಚಾರಿಟೆಬಲ್ ಟ್ರಸ್ಟ್ ಆಸ್ಪತ್ರೆಗೆ ದೌಡಾಯಿಸಿದೆ. 6 ಜಂಬೋ ಸಿಲಿಂಡರ್ ತಂದು ಆಸ್ಪತ್ರೆಗೆ ಟ್ರಸ್ಟ್ ಕೊಟ್ಟು ಭಾರೀ ಅವಘಡ ತಪ್ಪಿಸಿದಂತಾಗಿದೆ. ಸಹಾಯ ಮಾಡಿದ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಗೆ ಆಸ್ಪತ್ರೆ ಧನ್ಯವಾದ ಸಲ್ಲಿಸಿದೆ.ಈ ಹಿಂದೆ ಚಾಮರಾಜನಗರದಲ್ಲಿ ಆಕಿಜನ್ ಸಿಗದೇ ಸುಮಾರು 24 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ರಾಜಕೀಯ ನಾಯಕರು ಮಾತ್ರ ಆಕ್ಸಿಜನ್ ಸಿಗದೆ ಮೃತಪಟ್ಟಿಲ್ಲ ಎಂದು ಸಮರ್ಥನೆಗಿಳಿದಿದ್ದರು. ಇದಾದ ನಂತರ ಆಂಧ್ರಪ್ರದೆಶದಲ್ಲಿಯೂ ಆಕ್ಸಿಜನ್ ಬರೋದು 5 ನಿಮಿಷ ತಡವಾದ್ದರಿಂದ ಐಸಿಯುನಲ್ಲಿದ್ದ ಸುಮಾರು 11 ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಅಲ್ಲಿನ ಜನ ಸಿಎಂ ಜಗನ್ ವಿರುದ್ಧ ರೊಚ್ಚಿಗೆದ್ದಿದ್ದು, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು