News Karnataka Kannada
Tuesday, April 23 2024
Cricket
ವಿದೇಶ

ಆಸ್ಪತ್ರೆಗಳಿಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ: ಆರೋಗ್ಯ ಸಚಿವಾಲಯ

Photo Credit :

ಆಸ್ಪತ್ರೆಗಳಿಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ: ಆರೋಗ್ಯ ಸಚಿವಾಲಯ

ನವದೆಹಲಿ: ಇನ್ಮುಂದೆ ಆಸ್ಪತ್ರೆಗಳಿಗೆ ದಾಖಲಾಗಲು ಕೊರೊನಾ ಪಾಸಿಟಿವ್ (ಕೋವಿಡ್-19) ವರದಿ ತೋರಿಸುವುದು ಕಡ್ಡಾಯವಲ್ಲ ಎಂದು ಆರೋಗ್ಯ ಸಚಿವಾಲಯವು ಶನಿವಾರ ಆಸ್ಪತ್ರೆ ಪ್ರವೇಶದ ಬಗ್ಗೆ ಸಡಿಲಿಕೆಗಳನ್ನ ತಂದಿದೆ.

 

ಅಗತ್ಯದ ಆಧಾರದ ಮೇಲೆ ಆಸ್ಪತ್ರೆಗೆ ಪ್ರವೇಶ ನೀಡಲು ನಿರ್ಧರಿಸಿರುವ ಸಚಿವಾಲಯ, ಕೋವಿಡ್-19 ರ ತೀವ್ರ ಎರಡನೇ ಅಲೆಯ ವಿರುದ್ಧ ರಾಷ್ಟ್ರವು ಹೋರಾಡುತ್ತಿರುವುದರಿಂದ ಯಾವುದೇ ರೋಗಿಗೆ ಸಾಕಷ್ಟು ವೈದ್ಯಕೀಯ ಆರೈಕೆಯನ್ನ ನಿರಾಕರಿಸದಂತೆ ನೋಡಿಕೊಳ್ಳಲು ಸಚಿವಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆಎಂದು ಸ್ಪಷ್ಟಪಡಿಸಿದೆ.

 

ಹಾಗಾಗಿ ಇನ್ಮುಂದೆ ಕೋವಿಡ್ ರೋಗಿಗಳಿಗೆ ಕೋವಿಡ್ ಸೌಲಭ್ಯಗಳನ್ನು ನೀಡಲು ಕೋವಿಡ್-19 ವೈರಸ್ ಪಾಸಿಟಿವ್ ಪರೀಕ್ಷೆಯ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

 

ಹೌದು, ವಿನೂತನ ಕೊರೊನಾ ವೈರಸ್ ಪ್ರಕರಣಗಳ ಭಾರಿ ಹೆಚ್ಚಳದ ನಡುವೆ, ಕೋವಿಡ್ ರೋಗಿಗಳನ್ನು ಕೋವಿಡ್ ಸೌಲಭ್ಯಗಳ ವಿವಿಧ ವರ್ಗಗಳಿಗೆ ಸೇರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ರಾಷ್ಟ್ರೀಯ ನೀತಿಯನ್ನು ಪರಿಷ್ಕರಿಸಿದೆ. 

 

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ, ಕೋವಿಡ್ ರೋಗಿಗಳನ್ನು ನಿರ್ವಹಿಸುವ ಖಾಸಗಿ ಆಸ್ಪತ್ರೆಗಳು (ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ) ಸೇರಿದಂತೆ ಕೇಂದ್ರ ಸರ್ಕಾರದ ಅಡಿಯಲ್ಲಿನ ಆಸ್ಪತ್ರೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತವು ಇದನ್ನು ಪಾಲಿಸಬೇಕು ಎಂದು ತಿಳಿಸಿದೆ. 

 

ಕಳೆದ 24 ಗಂಟೆಗಳಲ್ಲಿ ಹೊಸ ಕೊರೊನಾ ವೈರಸ್ ಸೋಂಕುಗಳಲ್ಲಿ ಸ್ವಲ್ಪ ಕುಸಿತವಾಗಿದೆ ಎಂದು ಭಾರತ ವರದಿ ಮಾಡಿದೆ, 4,01,078 ಜನರು ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ದೇಶದಲ್ಲಿ ಸಂಚಿತ ಕೇಸ್ ಲೋಡ್ ಈಗ 2,18,92,676 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು