News Karnataka Kannada
Tuesday, April 16 2024
Cricket
ವಿದೇಶ

ಆರ್ಡರ್‌ ಮಾಡಿದ್ದು ಮೌಥ್‌ ವಾಷ್‌ ಗೆ ; ಬಂದಿದ್ದು ಏನು ಗೊತ್ತಾ ?

Photo Credit :

ಆರ್ಡರ್‌ ಮಾಡಿದ್ದು  ಮೌಥ್‌ ವಾಷ್‌ ಗೆ ; ಬಂದಿದ್ದು ಏನು ಗೊತ್ತಾ ?

ಮುಂಬೈ: ಆನ್​ಲೈನ್​ ಶಾಪಿಂಗ್​ ಅಮೇಜಾನ್​.ಕಮ್​ನಲ್ಲಿ ಕೊಲ್ಗೇಟ್​ ಮೌಥ್​​ವಾಶ್ ಆರ್ಡರ್​ ಮಾಡಿದ್ದ ಮುಂಬೈ ನಿವಾಸಿ, ಡೆಲಿವರಿ ಬಾಯ್​ ತಂದುಕೊಂಡ ಆರ್ಡರ್​ ಪ್ಯಾಕೇಜ್​ ತೆರೆದಾಗ ಅಚ್ಚರಿಯೇ ಕಾದಿತ್ತು. ಲೋಕೇಶ್​ ದಗಾ ಅವರು ತಾವು ಮೌಥ್​ವಾಶ್​ ಬುಕ್​ ಮಾಡಿದ್ದಾಗಿ ಅದಕ್ಕೆ ಸಂಬಂಧಿಸಿ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನನ್ನ ಆರ್ಡರ್​ ಬದಲಾವಣೆ ಆಗಿರುವುದಾಗಿ ಸೆಕ್ಯುರಿಟಿ ಗಾರ್ಡ್​ ತಿಳಿಸಿದರು. ಪ್ಯಾಕೇಜ್​ ಚಿಕ್ಕದಾಗಿದ್ದರಿಂದ ನನಗೂ ಆಶ್ಚರ್ಯವಾಯಿತು. ತೆಗೆದು ನೋಡಿದಾಗ ಮೌಥ್​ವಾಶ್​ ಬದಲು ರೆಡ್​ಮಿ ನೋಟ್​ 10 ಫೋನ್​ ಇರುವುದು ಗೊತ್ತಾಯಿತು ಎಂದಿದ್ದಾರೆ.
ತಾನು ಮೌಥ್​ವಾಶ್ ಬುಕ್​ ಮಾಡಿದ್ದರಿಂದ ಬದಲಾವಣೆ ಆಗಿರುವ ಆರ್ಡರ್​ ಅನ್ನು ಮರುಬದಲಾವಣೆ ಮಾಡಲು ದಗಾ ಯತ್ನಿಸಿದ್ದಾರೆ. ಆದರೆ, ರಿಟರ್ನ್​ ಆ್ಯಪ್​ ಮೂಲಕ​ ಸಾಧ್ಯವಾಗಲಿಲ್ಲ ಎಂದಿದ್ದಾರೆ.ಅಂದಹಾಗೆ ಫೋನ್​ ಬುಕ್​ ಮಾಡಿದ್ದು ಹೈದರಾಬಾದ್​ ಮೂಲಕ ವ್ಯಕ್ತಿ. ಆದರೆ, ಆತನಿಗೆ ಮೌಥ್​ವಾಶ್​ ಡೆಲಿವರಿ ಆಗಿದೆ. ಆದರೆ, ಮೌಥ್​ವಾಶ್​ ಬುಕ್​ ಮಾಡಿದ್ದ ದಗಾ ಅವರಿಗೆ ರೆಡ್​ಮಿ ನೋಟ್​ 10 ಫೋನ್​ ಬಂದಿದೆ. ಇದೀಗ ಏನು ಮಾಡುವುದು? ಹೇಗೆ ಬದಲಾವಣೆ ಮಾಡುವುದು ಎಂದು ತಿಳಿಯದೇ ಮರಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು