News Karnataka Kannada
Thursday, April 25 2024
ವಿದೇಶ

ಆರನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿ ಐ

Photo Credit :

ಆರನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿ ಐ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಸತತ 6ನೇ ಬಾರಿಯೂ ರೆಪೊ ದರದಲ್ಲಿ (ಶೇ 4) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಕೋವಿಡ್‌ ಎರಡನೇ ಅಲೆಯು ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದೆ. ಅರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಆರನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಆರ್‌ಬಿಐ 2020ರ ಮೇ 22ರಲ್ಲಿ ಕೊನೆಯ ಬಾರಿಗೆ ದರವನ್ನು ಪರಿಷ್ಕರಿಸಿತ್ತು. ಇದರಿಂದ ಬಡ್ಡಿದರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ದ್ವೈ–ಮಾಸಿಕ ವಿತ್ತೀಯ ನೀತಿ ಪರಿಶೀಲನೆಯನ್ನು ಪ್ರಕಟಿಸುವ ವೇಳೆ ಶಕ್ತಿಕಾಂತ ದಾಸ್‌ ಅವರು ಈ ಮಾಹಿತಿ ನೀಡಿದರು.
ಇದರ ಪರಿಣಾಮವಾಗಿ, ರಿವರ್ಸ್ ರೆಪೊ ದರದಲ್ಲೂ ಬದಲಾವಣೆ ಇರುವುದಿಲ್ಲ. ಆರ್‌ಬಿಐನಲ್ಲಿ ಇಟ್ಟಿರುವ ಠೇವಣಿಗಳಿಗಾಗಿ ಬ್ಯಾಂಕುಗಳಿಗೆ ಶೇಕಡಾ 3.35 ರಷ್ಟು ಬಡ್ಡಿ ಮುಂದುವರಿಯುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು