News Karnataka Kannada
Wednesday, April 24 2024
Cricket
ವಿದೇಶ

ಆಮ್ಲಜನಕ ಸಿಲಿಂಡರ್‌ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಉದ್ಯಮಿ ನವನೀತ್‌ ಕಲ್ರಾ ಬಂಧನ

Photo Credit :

ಆಮ್ಲಜನಕ  ಸಿಲಿಂಡರ್‌ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಉದ್ಯಮಿ ನವನೀತ್‌ ಕಲ್ರಾ ಬಂಧನ

ನವದೆಹಲಿ: ಆಮ್ಲಜನಕ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್‌ ಕಲ್ರಾ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕಲ್ರಾ ಮಾಲಿಕತ್ವದ ‘ಖಾನ್‌ ಚಾಚಾ, ಟೌನ್‌ ಹಾಲ್‌ ಮತ್ತು ನೇಜ್ ಆಂಡ್‌ ಜು’ ರೆಸ್ಟೊರೆಂಟ್‌ಗಳಲ್ಲಿ ಕಾನೂನು ಬಾಹೀರವಾಗಿ ಸಂಗ್ರಹಿಸಲಾಗಿದ್ದ 524 ಆಮ್ಲಜನಕ ಸಿಲಿಂಡರ್‌ಗಳನ್ನು ಮೇ 7ರಂದು ವಶಪಡಿಸಿಕೊಳ್ಳಲಾಗಿತ್ತು. ಮೇ 7ರಿಂದ ತಲೆಮರೆಸಿಕೊಂಡಿದ್ದ ಕಲ್ರಾ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ದೆಹಲಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ಮಾಡಿದ್ದ ನ್ಯಾಯಾಲಯವು ಕಲ್ರಾ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ ಕಲ್ರಾ ಅವರಿಗೆ ಅಲ್ಲಿಯೂ ಜಾಮೀನು ದೊರೆತಿರಲಿಲ್ಲ.
ಗುರುಗ್ರಾಮ್‌ನ ತೋಟದ ಮನೆಯಲ್ಲಿ ಅಡಗಿಕೊಂಡಿದ್ದ ಕಲ್ರಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು