News Karnataka Kannada
Friday, April 19 2024
Cricket
ವಿದೇಶ

ಆಮ್ಲಜನಕ ಟ್ಯಾಂಕರ್‌ಗೆ ಸುಂಕವಿಲ್ಲ, ಹೆದ್ದಾರಿ ಟೋಲ್ ವಿನಾಯಿತಿ

Photo Credit :

ಆಮ್ಲಜನಕ ಟ್ಯಾಂಕರ್‌ಗೆ ಸುಂಕವಿಲ್ಲ, ಹೆದ್ದಾರಿ ಟೋಲ್ ವಿನಾಯಿತಿ

ನವದೆಹಲಿ, : ಆಮ್ಲಜನಕ ಹೊತ್ತು ಸಾಗುವ ಟ್ಯಾಂಕರ್ ತ್ವರಿತವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಲು ಗ್ರೀನ್ ಕಾರಿಡಾರ್ ಅಗತ್ಯವಿದೆ ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಆಮ್ಲಜನಕ ಟ್ಯಾಂಕರ್‌ಗಳಿಗೆ ಸುಂಕ ವಿಧಿಸದಿರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನಿರ್ಧರಿಸಿದೆ.ದೇಶದಲ್ಲಿ ವೈದ್ಯಕೀಯ ಬಳಕೆಯ ಆಮ್ಲಜನಕ ಬೇಡಿಕೆ ಹೆಚ್ಚಾಗಿದೆ. ಆಮ್ಲಜನಕ ಲಭ್ಯವಾದರೂ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಹಾಗೂ ಸರಾಗ ಸಂಚಾರ ವ್ಯವಸ್ಥೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಟೋಲ್ ಪ್ಲಾಜಾಗಳಲ್ಲಿ ಆಮ್ಲಜನಕವುಳ್ಳ ಟ್ಯಾಂಕರ್‌ಗಳಿಗೆ ಮೊದಲು ಆದ್ಯತೆ ನೀಡಲು NHAI ಮುಂದಾಗಿದೆ.
ತುರ್ತು ಸೇವೆ ಒದಗಿಸುವ ಆಂಬ್ಯುಲೆನ್ಸ್ ಸಾಗಾಟಕ್ಕೆ ಇರುವ ನಿಯಮಗಳು ಆಮ್ಲಜನಕ ಸಾಗಾಟದ ವಾಹನಕ್ಕೂ ಅನ್ವಯವಾಗಲಿದ್ದು, ಎರಡು ತಿಂಗಳುಗಳ ಕಾಲ ಟೋಲ್ ಇಲ್ಲದೆ ತ್ವರಿತವಾಗಿ ಸಾಗಾಟ ನಡೆಸಬಹುದಾಗಿದೆ.
ಫಾಸ್‌ಟ್ಯಾಗ್ ಜಾರಿಗೊಂಡ ಬಳಿಕ ಆದ್ಯತೆ ಮೇರೆಗೆ ವಾಹನ ಸಾಗಾಟದ ಮೇಲೆ ನಿಗಾ ವಹಿಸಲಾಗಿದ್ದು, ಆಮ್ಲಜನಕ ಸಾಗಾಟ, ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ದೇಶದೆಲ್ಲೆಡೆ 581 PSA ಆಮ್ಲಜನಕ ಘಟಕಗಳಲ್ಲಿ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸಲು NHAI ಮುಂದಾಗಿದೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಹೆಚ್ಚು ಹೆಚ್ಚು ಆಮ್ಲಜನಕ ಘಟಕಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು