News Karnataka Kannada
Thursday, April 25 2024
ವಿದೇಶ

ಆಮ್ಲಜನಕ ಕೊರತೆಯಿಂದ ಪ್ರಾಣ ಬಿಟ್ಟ ಬಾಲಿವುಡ್ ನಟ ರಾಹುಲ್‌ ವೋರಾ

Photo Credit :

ಆಮ್ಲಜನಕ  ಕೊರತೆಯಿಂದ ಪ್ರಾಣ ಬಿಟ್ಟ  ಬಾಲಿವುಡ್ ನಟ  ರಾಹುಲ್‌ ವೋರಾ

ನವದೆಹಲಿ: ಬಾಲಿವುಡ್‌ ನಟ ಹಾಗೂ ಯುಟ್ಯೂಬರ್‌ ರಾಹುಲ್‌ ವೋರಾ ಕೋವಿಡ್‌ನಿಂದಾಗಿ ಭಾನುವಾರ ನಿಧನರಾದರು. ಅವರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.ರಾಹುಲ್‌ ವೋರಾ ಕೋವಿಡ್‌ ಸೋಂಕು ದೃಢಪಟ್ಟ ಬಳಿಕ ದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾವಿಗೂ ಮುನ್ನ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಸಾಯುವುದಕ್ಕೂ ಮುನ್ನ ರಾಹುಲ್‌ ಒಂದು ವಿಡಿಯೊ ಮಾಡಿದ್ದರು. ಅದರಲ್ಲಿ ಆಮ್ಲಜನಕ ಮುಗೀತಾ ಇದೆ, ಬರ್ತಾ ಇಲ್ಲ ಅಂತ ಹೇಳಿದ ಕೆಲವೇ ಕ್ಷಣಗಳಲ್ಲಿ ಅವರು ಪ್ರಾಣ ಬಿಟ್ಟಿದ್ದರು. ನಂತರ ಈ ವಿಡಿಯೊವನ್ನು ಅವರ ಪತ್ನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಮೇ 8ರಂದು ರಾಹುಲ್‌ ಫೇಸ್‌ಬುಕ್‌ನಲ್ಲಿ ಫೋಸ್ಟ್‌ವೊಂದನ್ನು ಹಾಕಿದ್ದರು. ಅದರಲ್ಲಿ ತಾವು ದಾಖಲಾಗಿರುವ ಆಸ್ಪತ್ರೆ, ಬೆಡ್‌ ಸಂಖ್ಯೆ ನಮೂದಿಸಿ ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮಂತ್ರಿ ಸಿಸೋಡಿಯಾ ಅವರಿಗೂ ಟ್ಯಾಗ್‌ ಮಾಡಿದ್ದರು.
ಬರಹದ ಕೊನೆಯಲ್ಲಿ ಜೀವನದಲ್ಲಿ ಈ ಸಲ ನಾನು ಸೋತೆ, ಮತ್ತೆ ಹುಟ್ಟಿ ಬರುತ್ತೇನೆ ಎಂದು ಬರೆದುಕೊಂಡಿದ್ದರು. ಹೀಗೆ ಬರೆದ ಕೆಲವೇ ಗಂಟೆಗಳಲ್ಲಿ ರಾಹುಲ್‌ ನಿಧನರಾದರು ಎಂದು ಅವರ ಕುಟುಂಬದವರು ಹೇಳಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು