News Karnataka Kannada
Monday, April 15 2024
Cricket
ವಿದೇಶ

ಆನಂದಯ್ಯ ಔಷಧ ತಯಾರಿಕೆ ಆರಂಭ; ಆನ್​ಲೈನ್​ ಮೂಲಕವೂ ಔಷಧ ವಿತರಣೆ

Photo Credit :

ಆನಂದಯ್ಯ  ಔಷಧ ತಯಾರಿಕೆ   ಆರಂಭ; ಆನ್​ಲೈನ್​ ಮೂಲಕವೂ ಔಷಧ ವಿತರಣೆ

ಹೈದರಾಬಾದ್​: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣದಲ್ಲಿ ನಾಟಿ ಔಷಧ ತಜ್ಞ ಆನಂದಯ್ಯ ಇಂದಿನಿಂದ‌ ಔಷಧ ತಯಾರಿಕೆ ಮತ್ತೆ ಆರಂಭಿಸಿದ್ದಾರೆ. ಆಂಧ್ರ ಸರ್ಕಾರ ಮತ್ತು ಆಂಧ್ರ ಹೈಕೋರ್ಟ್​ ಅನುಮತಿ ಮೇರೆಗೆ ಕೊರೊನಾ ವಿರುದ್ಧ ಹೋರಾಡಲು ಆನಂದಯ್ಯ ಈ ನಾಟಿ ಆಯುರ್ವೇಧ ಔಷಧವನ್ನು ನೀಡುತ್ತಿದ್ದಾರೆ.
ನಾಟಿ ಔಷಧ ತಜ್ಞ ಆನಂದಯ್ಯ ಇಂದಿನಿಂದ‌ ಔಷಧ ತಯಾರಿ ಮತ್ತೆ ಆರಂಭಿಸಿದ್ದು, ಔಷಧ ವಿತರಣೆಗೆ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಇತರೆ ಜಿಲ್ಲೆಗಳಿಗೂ ಆನಲೈನ್‌ ಮೂಲಕ ಔಷಧ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಆನಂದಯ್ಯ ತಂಡ ವಿಶೇಷ ವೆಬ್ ಸೈಟ್ ಸಿದ್ದಮಾಡುತ್ತಿದೆ. ಆನಂದಯ್ಯ ಔಷಧ ತಯಾರಿ, ವಿತರಣೆಯಲ್ಲಿ‌ ಆನಂದಯ್ಯ ಅವರ ನಿರ್ಣಯವೇ ಅಂತಿಮ. ಕೊವಿಡ್ ನಿಬಂಧನೆಗಳ‌ ಜಾರಿ, ಅವಶ್ಯಕ‌ ಸಹಕಾರವನ್ನು‌ ಆಂಧ್ರ ಸರಕಾರ ಕಲ್ಪಿಸುತ್ತಿದೆ ಎಂದು ನೆಲ್ಲೂರು ಜಿಲ್ಲಾ ಸರ್ವಪಲ್ಲಿ‌ ಶಾಸಕ ಕಾಕಾನಿ‌ ಗೋವರ್ಧನ ರೆಡ್ಡಿ‌ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು