News Karnataka Kannada
Wednesday, April 24 2024
Cricket
ವಿದೇಶ

ಆದಾಯ ತೆರಿಗೆ ವಿಭಾಗದ ಕೆಲಸ ಕೊನೆಗೊಳಿಸಲು ಸಮಯ ವಿಸ್ತರಿಸಿದ ಕೇಂದ್ರ ಸರ್ಕಾರ

Photo Credit :

ಆದಾಯ ತೆರಿಗೆ ವಿಭಾಗದ ಕೆಲಸ ಕೊನೆಗೊಳಿಸಲು ಸಮಯ ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಮೇ 31 ರವರೆಗೆ ಸಮಯ ವಿಸ್ತರಿಸಿದ ಆದಾಯ ತೆರಿಗೆ ವಿಭಾಗಗಳ ಕೆಲಸಗಳು. 2019-20ರ ಹಣಕಾಸು ವರ್ಷದ ಸಂಬಂಧಿಸಿ ವಿಳಂಬವಾಗಿ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವುದು ಸೇರಿದಂತೆ ವಿವಿಧ ಆದಾಯ ತೆರಿಗೆ ವಿಭಾಗದ ಕೆಲಸಗಳಿಗೆ ಸರ್ಕಾರವು ಸಮಯವನ್ನು ವಿಸ್ತರಿಸಿದೆ.

 

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವಶ್ಯಕತೆಗಳ ಮೇಲೆ ವಿನಾಯಿತಿ ಪಡೆಯಲು ವಿವಿಧ ಪಾಲುದಾರರಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದೆ.

 

“ತೀವ್ರವಾದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪ್ರತಿಕೂಲ ಸನ್ನಿವೇಶಗಳ ದೃಷ್ಟಿಯಿಂದ ಮತ್ತು ದೇಶಾದ್ಯಂತದ ತೆರಿಗೆದಾರರು, ತೆರಿಗೆ ಸಲಹೆಗಾರರು ಮತ್ತು ಇತರ ಮಧ್ಯಸ್ಥಗಾರರಿಂದ ಬಂದಿರುವ ಹಲವು ವಿನಂತಿಗಳನ್ನು ಗಮನಿಸಿ ಸರ್ಕಾರ ಸಮಯಾವಕಾಶ ವಿಸ್ತರಿಸುವ ತೀರ್ಮಾನಕ್ಕೆ ಬಂದಿದೆ.”ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

 

ಮೌಲ್ಯಮಾಪನ ವರ್ಷವಾಗಿರುವ 2020-21ಕ್ಕೆ ಉಪ-ಸೆಕ್ಷನ್ (4) ರ ಅಡಿಯಲ್ಲಿ ವಿಳಂಬಿತ ರಿಟರ್ನ್ ಮತ್ತು ಕಾಯಿದೆಯ ಸೆಕ್ಷನ್ 139 ರ ಉಪವಿಭಾಗ (5) ರ ಅಡಿಯಲ್ಲಿ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸುವವರು 2021 ರ ಮಾರ್ಚ್ 31 ರಂದು ಅಥವಾ ಅದಕ್ಕೆ ಮುನ್ನ ಸಲ್ಲಿಸಬೇಕಾಗಿತ್ತು ಆದರೆ ಇದನ್ನೀಗ ಮೇ 31, 2021 ರಂದು ಅಥವಾ ಅದಕ್ಕೆ ಮೊದಲಿಗೆ ಸಲ್ಲಿಕೆ ಮಾಡಬಹುದು ಎಂದು ಸಿಬಿಡಿಟಿ ಹೇಳಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು