News Karnataka Kannada
Thursday, April 18 2024
Cricket
ವಿದೇಶ

ಅಸ್ಸಾಂನಲ್ಲಿ 6.4 ತೀವ್ರತೆಯ ಭೂಕಂಪನ

Photo Credit :

ಅಸ್ಸಾಂನಲ್ಲಿ 6.4 ತೀವ್ರತೆಯ ಭೂಕಂಪನ

ಅಸ್ಸಾಂ: ಅಸ್ಸಾಂನಲ್ಲಿ ಇಂದು ಬೆಳಗ್ಗಿನ ಜಾವ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4ರಷ್ಟಿತ್ತು ಎಂದು ವರದಿಯಾಗಿದೆ.ಬೆಳಗ್ಗೆ ಸುಮಾರು 7.51ಕ್ಕೆ ಅಸ್ಸಾಂ ಒಳಗೊಂಡು ಇಡೀ ಈಶಾನ್ಯ ಭಾರತ ಹಾಗು ಉತ್ತರ ಬಂಗಾಳದ ಪ್ರದೇಶದಲ್ಲಿ ಭೂಮಿ ಕಂಪಿಸಿುದೆ. ಪರಿಣಾಮ, ಜನರು ಆಂತಕಕ್ಕೊಳಗಾದರು. ಇಲ್ಲಿನ ಮನೆಗಳ ಛಾವಣೆ ಕುಸಿದು ಹೋಗಿವೆ. ಜೊತೆಗೆ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ವರದಿಗಳಿಲ್ಲ. ಭೂಕಂಪನ ಸೃಷ್ಟಿಸಿದ ಅನಾಹುತದ ಕುರಿತ ಕೆಲವು ಫೋಟೋಗಳನ್ನು ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿದೆ. ಎಲ್ಲರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಎಲ್ಲರೂ ಜಾಗರೂಕರಾಗಿರುವಂತೆ ವಿನಂತಿಸುತ್ತೇನೆ’ ಎಂದು ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ. ಘಟನೆ ತಿಳಿದು ಸಿಎಂ ಸೋನಾವಾಲ್‌ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ನೀಡುವ ಕುರಿತು ಭರವಸೆ ನೀಡಿದ್ದಾರೆ.ಭೂಕಂಪನ ಕೇಂದ್ರವನ್ನು ಅಸ್ಸಾಂ ರಾಜಧಾನಿ ಗುವಾಹಟಿಯಿಂದ 140 ಕಿಮೀ ದೂರದಲ್ಲಿರುವ ಧೇಕಿಯಾಜುಲಿ ಎಂದು ಗುರುತಿಸಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು