News Karnataka Kannada
Tuesday, April 16 2024
Cricket
ವಿದೇಶ

ಅನೇಕ ವರ್ಷಗಳ ಹಿಂದೆ ಮುಚ್ಚಿದ್ದ ಶಾಲೆಯಲ್ಲಿ 215 ಮಕ್ಕಳ ಅವಶೇಷ ಪತ್ತೆ

Photo Credit :

ಅನೇಕ ವರ್ಷಗಳ ಹಿಂದೆ ಮುಚ್ಚಿದ್ದ ಶಾಲೆಯಲ್ಲಿ 215 ಮಕ್ಕಳ ಅವಶೇಷ ಪತ್ತೆ

ಕೆನಡಾ : ಕೆನಡಾದ ಶಾಲೆಯೊಂದರಲ್ಲಿ 215 ಮಕ್ಕಳ ಅವಶೇಷ ಪತ್ತೆ ಯಾಗಿದ್ದು, 1978 ರಲ್ಲಿ ಮುಚ್ಚಲಾದ ಶಾಲೆ ಅದಾಗಿತ್ತು ಎಂದು ತಿಳಿದುಬಂದಿದೆ. 

 

ಕೆನಡಾದ ಮೂಲನಿವಾಸಿಗಳನ್ನು ಒಟ್ಟುಗೂಡಿಸಲು ಒಂದು ಶತಮಾನದ ಹಿಂದೆ ಸ್ಥಾಪಿಸಿದ್ದ ಬೋರ್ಡಿಂಗ್ ಶಾಲೆಯಲ್ಲಿ 215 ಮಕ್ಕಳ ಅವಶೇಷಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ . ಅವರು 1978 ರಲ್ಲಿ ಮುಚ್ಚಿದ ಕಮ್ಯೂಪ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ ನ ಮಕ್ಕಳಾಗಿದ್ದರು .

 

ವರದಿಗಳ ಪ್ರಕಾರ, ಕೆನಡಾದ ವಸತಿ ಶಾಲೆಗಳು ಮಕ್ಕಳನ್ನು ತಮ್ಮ ಕುಟುಂಬದಿಂದ ಬಲವಂತವಾಗಿ ಬೇರ್ಪಡಿಸಿ ಕರೆತರುತ್ತಿದ್ದರು ಎಂದು ತಿಳಿದುಬಂದಿದ್ದು, ಇದನ್ನು 1890 ರಿಂದ 1969 ರವರೆಗೆ ಕೆನಡಾದ ಸರ್ಕಾರದ ಪರವಾಗಿ ಕ್ಯಾಥೋಲಿಕ್ ಚರ್ಚ್ ನಿರ್ವಹಿಸುತ್ತಿತ್ತು ಎಂದು ಹೇಳಲಾಗಿದೆ . 

 

ರಾಡಾರ್ ಗಳನ್ನು ಬಳಸಿ ಅವಶೇಷಗಳನ್ನು ಪತ್ತೆಮಾಡಲಾಗಿದ್ದು , ಇದರ ಪ್ರಾಥಮಿಕ ಸಂಶೋಧನೆಗಳ ವರದಿ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಜ್ಞರ ಹೇಳಿಕೆ ಉಲ್ಲೇಖಿಸಿ ವರದಿ ತಿಳಿಸಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು