News Karnataka Kannada
Thursday, April 18 2024
Cricket
ವಿದೇಶ

ಅತಿದೊಡ್ಡ ಫಿಲ್ಮ್ ಸಿಟಿ ನಿರ್ಮಾಣದೆಡೆಗೆ ಮೊದಲ ಹೆಜ್ಜೆ ಇಟ್ಟ ಸಿಎಂ ಯೋಗಿ

Photo Credit :

ಅತಿದೊಡ್ಡ ಫಿಲ್ಮ್ ಸಿಟಿ ನಿರ್ಮಾಣದೆಡೆಗೆ ಮೊದಲ ಹೆಜ್ಜೆ ಇಟ್ಟ ಸಿಎಂ ಯೋಗಿ

ನೋಯ್ಡಾ: ಅತಿದೊಡ್ಡ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಆಲೋಚನೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ಅವರು ಇಂದು (ಸೆಪ್ಟೆಂಬರ್ 22) ಬಾಲಿವುಡ್ ಹೆಸರಾಂತ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದಾರೆ ಹಾಗೂ ಈ ಸಭೆ ಸಿಎಂ ಅವರ ನಿವಾಸದಲ್ಲಿ ನಡೆಯಲಿದೆ.

ಸಭೆಯಲ್ಲಿ ಭಾಗವಹಿಸಲು ಹಲವಾರು ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಇಂದು ಸಿಎಂ ಯೋಗಿಯ ನಿವಾಸವನ್ನು ತಲುಪಲಿದ್ದಾರೆ. ಗೌತಮ್ ಬುದ್ಧ ನಗರದಲ್ಲಿ ಭಾರತದ “ಅತಿದೊಡ್ಡ ಮತ್ತು ಸುಂದರವಾದ” ಚಲನಚಿತ್ರ ನಗರವನ್ನು ಮಾಡುವ ಬಗ್ಗೆ ಯೋಗಿ ಆದಿತ್ಯನಾಥ್ ಘೋಷಿಸಿದ ನಂತರ ನಡೆಯುವ ಮೊದಲ ಸಭೆ ಇದಾಗಿದೆ.

ಇದರೊಂದಿಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಮೀರತ್ ವಿಭಾಗದ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸುವ ಸಭೆಯಲ್ಲಿ ನೋಯ್ಡಾ, ಗ್ರೇಟರ್ ನೋಯ್ಡಾ ಅಥವಾ ಯಮುನಾ ಎಕ್ಸ್‌ಪ್ರೆಸ್ ವೇ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂಕ್ತ ಭೂಮಿಯನ್ನು ಹುಡುಕಲು ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದರು. ಇದರೊಂದಿಗೆ ಯುಪಿ ಸರ್ಕಾರ ಮೂರು ವಿಭಿನ್ನ ಅಧಿಕಾರಿಗಳಿಂದ ಫಿಲ್ಮ್ ಸಿಟಿಗೆ ಭೂ ಪ್ರಸ್ತಾಪವನ್ನು ಕೋರಿದ್ದರು.

ವರದಿಗಳ ಪ್ರಕಾರ, ನೋಯ್ಡಾ ಪ್ರಾಧಿಕಾರವು ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ 500 ಎಕರೆ ಭೂಮಿಯನ್ನು ಸರ್ಕಾರಕ್ಕೆ ಕಳುಹಿಸಿತು. ಮತ್ತೊಂದೆಡೆ ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿಯ ಪ್ರದೇಶದ ಸೆಕ್ಟರ್ -21 ರಲ್ಲಿ ಚಲನಚಿತ್ರ ನಗರವನ್ನು ಸ್ಥಾಪಿಸುವ ಯೋಜನೆ ಇದ್ದು, ಇದಕ್ಕಾಗಿ ಸುಮಾರು 1000 ಎಕರೆ ಭೂಮಿಯನ್ನು ಲಭ್ಯಗೊಳಿಸಲಾಗಿದ್ದು, 780 ಎಕರೆ ಕೈಗಾರಿಕಾ ಪ್ರದೇಶವನ್ನು ಪ್ರಸ್ತಾಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು