Bengaluru 28°C
Ad

ವೃದ್ಧನ ಮುಖಕ್ಕೆ ಫೋಮ್​​​​ ಸ್ಪ್ರೇ ಮಾಡಿದ ಯುವಕನ ಕಥೆ ಏನಾಯ್ತು ನೋಡಿ

New Project (4)

ಝಾನ್ಸಿ:  ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದು, ಹೈವೇ ರಸ್ತೆಯಲ್ಲಿ ಸೈಕಲ್‌ನಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ವೃದ್ಧರೊಬ್ಬರ ಹಿಂದಿನಿಂದ ಬೈಕ್‌ನಲ್ಲಿ ಬಂದ ಯುವಕನೊಬ್ಬ ನಡು ರಸ್ತೆಯಲ್ಲಿಯೇ ಆ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಎರಚಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡು ಸರಿಯಾಗಿ ಸನ್ಮಾನ ಮಾಡಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ನಡೆದಿದ್ದು, ಯುವಕನೊಬ್ಬ ರೀಲ್ಸ್‌ ವಿಡಿಯೋ ಮಾಡುವ ಸಲುವಾಗಿ ರಸ್ತೆಯಲ್ಲಿ ಸೈಕಲ್‌ ತುಳಿಯುತ್ತಾ ಹೋಗುತ್ತಿದ್ದ ಅಮಾಯಕ ವ್ಯಕ್ತಿಯ ಮೇಲೆ ಬಿಳಿ ಬಣ್ಣದ ಸ್ಪ್ರೇ ಎರಚಿ ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ತಕ್ಷಣ ಕಾರ್ಯನಿರತರಾದ ಝಾನ್ಸಿ ಪೊಲೀಸರು ಆ ಯುವಕನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿನಯ್‌ ಯಾದವ್‌ ಎಂದು ಗುರುತಿಸಲಾಗಿದೆ. ಇದೇ ರೀತಿಯ ಹುಚ್ಚಾಟದ ವಿಡಿಯೋಗಳನ್ನು ಹರಿಬಿಡುವ ಈತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಕೂಡಾ ಇದ್ದಾರೆ.

Ad
Ad
Nk Channel Final 21 09 2023