Bengaluru 24°C
Ad

ರಜೆ ಇಲ್ಲದೆ 104 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದ ವ್ಯಕ್ತಿ ಸಾವು

 ರಜೆ ಪಡೆಯದೆ ನಿರಂತರ 104 ದಿನಗಳ ಕಾಲ ಕೆಲಸ ಮಾಡಿದ ವ್ಯಕ್ತಿಯೊಬ್ಬ ಅಂಗಾಂಗ್ಯ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದಲ್ಲಿ ಕಾರ್ಮಿಕ ಕಾನೂನುಗಳು ಕೂಡ ಅಷ್ಟು ಕಠಿಣವಾಗಿಲ್ಲ, ಅದಕ್ಕಾಗಿಯೇ ಚೀನಾ ಉತ್ಪಾದನಾ ವಲಯದ ಕೇಂದ್ರವಾಗಿದೆ. ಇತ್ತೀಚೆಗೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.

ಕಂಪನಿಯು ಆತನನ್ನು ಗುಲಾಮನಂತೆ ನಡೆಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ, ಅವರು 104 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದರು, ಅಷ್ಟೇ ಅಲ್ಲದೆ ದಿನಕ್ಕೆ 8 ಗಂಟೆಗಳಲ್ಲ ಓವರ್​ ಟೈಮ್ ಕೂಡ ಮಾಡಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು. ಏಪ್ರಿಲ್ 6 ರಂದು ಅವರು ಒಂದು ದಿನ ರಜೆ ತೆಗೆದುಕೊಂಡಿದ್ದರು. ಮೇ 25 ರಂದು, ಅವರ ಆರೋಗ್ಯವು ಹದಗೆಟ್ಟಿತು ಮತ್ತು ಮೂರು ದಿನಗಳ ನಂತರ ಅವರ ಸ್ಥಿತಿ ಗಂಭೀರವಾಯಿತು. ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆಯಿಂದ ಜೂನ್ 1 ರಂದು ನಿಧನರಾದರು.

Ad
Ad
Nk Channel Final 21 09 2023