ತೆಲಂಗಾಣ : ಟಿಜಿಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮಾರ್ಗಮಧ್ಯದಲ್ಲಿಯೇ ಬಸ್ಸಿನ ಮಹಿಳಾ ನಿರ್ವಾಹಕಿ ಮತ್ತು ನರ್ಸ್ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಹಿಂದೆಯೂ ಚಲಿಸುತ್ತಿರುವ ಬಸ್, ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆ ನಡೆದ ಘಟನೆಗಳು ನಡೆದಿದೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಿಳಾ ಕಂಡಕ್ಟರ್ ಮತ್ತು ನರ್ಸ್ ಒಬ್ಬರು ಮಹಿಳೆಗೆ ಅದೇ ಬಸ್ಸಿನಲ್ಲಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಸಂಧ್ಯಾ ಎಂದು ಗುರುತಿಸಲಾಗಿರುವ ತುಂಬು ಗರ್ಭಿಣಿ ಮಹಿಳೆ ತನ್ನ ಕುಟುಂಬದೊಂದಿಗೆ ರಕ್ಷಾ ಬಂಧನವನ್ನು ಆಚರಿಸಲು ಮಹಬೂಬ್‌ನಗರ ಜಿಲ್ಲೆಯ ವನಪರ್ತಿಗೆ ಪ್ರಯಾಣಿಸುತ್ತಿದ್ದರು . ಬಸ್ ನಾಚಹಳ್ಳಿ ಸಮೀಪಿಸುತ್ತಿದ್ದಂತೆ ಆಕೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಂಧ್ಯಾ ನೋವಿನಿಂದ ನರಳುತ್ತಿದ್ದುದನ್ನು ಗಮನಿಸಿದ ಮಹಿಳಾ ಕಂಡಕ್ಟರ್ ಜಿ ಭಾರತಿ ನಾಚಹಳ್ಳಿ ಬಳಿ ಬಸ್ ನಿಲ್ಲಿಸಿದ್ದಾರೆ. ಮತ್ತು ತನ್ನ ಸಮಯ ಪ್ರಜ್ಞೆಯಿಂದ ಆ ಬಸ್ಸಿನಲ್ಲಿದ್ದ ನರ್ಸ್ ಸಹಾಯದಿಂದ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.
రాఖీ పండుగ నాడు #TGSRTC బస్సులో గర్భిణికి డెలివరీ చేసి ఒక మహిళా కండక్టర్ మానవత్వం చాటుకున్నారు. తాను విధులు నిర్వర్తిస్తోన్న బస్సులో గర్భిణికి పురిటి నొప్పులు రాగా, ఆమె వెంటనే స్పందించి బస్సులో ప్రయాణిస్తోన్న నర్సుతో కలిసి ప్రసవం చేశారు. అనంతరం తల్లీబిడ్డను స్థానిక ఆస్పత్రికి… pic.twitter.com/nTpfVpl5iT
— VC Sajjanar – MD TGSRTC (@tgsrtcmdoffice) August 19, 2024