Bengaluru 17°C

ಸದನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವೇಳೆ ನಿದ್ದೆಗೆ ಜಾರಿದ ರಾಹುಲ್‌ :ವಿಡಿಯೋ ವೈರಲ್‌

ಸಂಸತ್‌ ಅಧಿವೇಶನದಲ್ಲಿ ನಿನ್ನೆ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆಯಾಗುತ್ತಿದ್ದ ವೇಳೆ ರಾಹುಲ್‌ ಗಾಂಧಿ ನಿದ್ದೆಗೆ ಜಾರಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನವದೆಹಲಿ: ಸಂಸತ್‌ ಅಧಿವೇಶನದಲ್ಲಿ ನಿನ್ನೆ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆಯಾಗುತ್ತಿದ್ದ ವೇಳೆ ರಾಹುಲ್‌ ಗಾಂಧಿ ನಿದ್ದೆಗೆ ಜಾರಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿರುವಾಗ ನಿದ್ದೆಗೆ ಜಾರಿದ್ದಾರೆ. ಈ ಕುರಿತಾದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.


ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ಚರ್ಚೆಯ ಸಮಯದಲ್ಲಿ ನಿದ್ರೆಗೆ ಜಾರಿದ ವಿರೋಧ ಪಕ್ಷದ ಸಂಸದರನ್ನು ಲೇವಡಿ ಮಾಡಿದ್ದಾರೆ. ರಾಹುಲ್‌ ಮಾತ್ರವಲ್ಲದೇ ಪ್ರತಿಪಕ್ಷದ ಕೆಲವು ಸಂಸದರು ಮಹತ್ವದ ಚರ್ಚೆ ಸಂದರ್ಭದಲ್ಲಿ ನಿದ್ದೆಗೆ ಜಾರಿದ್ದಾರೆ.


https://x.com/iSumitjoshi/status/1821471168076853435?


Nk Channel Final 21 09 2023