Bengaluru 27°C

ಕೋಲ್ಕತ್ತಾ ವೈದ್ಯೆ ಕೇಸ್ ಕುರಿತು ಆಕ್ರೋಶ ಹೊರಹಾಕಿದ ವಿರಾಟ್ ಕೊಹ್ಲಿ‌

Virat

ಕೋಲ್ಕತ್ತಾ: ಇತ್ತೀಚೆಗೆ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಲಾಯ್ತು. ಈ ಕೃತ್ಯವನ್ನು ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಖಂಡಿಸಿದ್ದಾರೆ.


ಇದು ಬಹಳ ನೋವಿನ ವಿಚಾರ. ಈ ಸುದ್ದಿ ಕೇಳಿ ನನಗೆ ಆಘಾತ ಆಯ್ತು. ಈ ರೀತಿಯ ಕೆಟ್ಟ ಸಮಾಜದ ಭಾಗವಾಗಿದ್ದಕ್ಕೆ ನನಗೆ ನಾಚಿಕೆ ಆಗುತ್ತಿದೆ. ನಾವು ನಮ್ಮ ಆಲೋಚನೆ ಬದಲಾಯಿಸಬೇಕಿದೆ. ಹೆಣ್ಣು ಮತ್ತು ಗಂಡನ್ನು ಸಮಾನವಾಗಿ ನೋಡಬೇಕಿದೆ. ಕೃತ್ಯವನ್ನು ತಡೆಯದೆ ನೋಡುತ್ತಾ ನಿಂತಿದ್ದವರು ಹೇಡಿಗಳು ಎಂದು ಭಾವಿಸುತ್ತೇನೆ. ಇಂಥದ್ದೇ ಘಟನೆ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ನಡೆದಾಗ ನೋಡುತ್ತಾ ಸುಮ್ಮನೇ ಇರ್ತೀರಾ? ಎಂಬ ಪ್ರಶ್ನೆಯನ್ನು ಕೊಹ್ಲಿ ಕೇಳಿದ್ದಾರೆ. ಕೊಹ್ಲಿ ಆಕ್ರೋಶದ ನುಡಿಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.


Nk Channel Final 21 09 2023